Home ಜಿಲ್ಲೆ ಬೆಂಗಳೂರು ಗ್ರಾಮಗಳ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡೋಣ: ಲಕ್ಷ್ಮಣಗೌಡ

ಗ್ರಾಮಗಳ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡೋಣ: ಲಕ್ಷ್ಮಣಗೌಡ

ಕೋಲಾರ,ಸೆ.೧- ಚುನಾವಣೆ ಸಂದರ್ಭದಲ್ಲಿ ಅವರವರ ಪಕ್ಷದ ರಾಜಕಾರಣ ಮಾಡುವುದು ಸಹಜ. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಗ್ರಾಮಗಳ ಅಭಿವೃದ್ಧಿಯ ವಿಚಾರ ಬಂದಾಗ ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಮಾಜ ಸೇವಕ ಹಾಗೂ ಎಲ್.ಜಿ. ಫೌಂಡೇಷನ್ ಅಧ್ಯಕ್ಷ ಲಕ್ಷ್ಮಣಗೌಡ ತಿಳಿಸಿದರು


ತಾಲ್ಲೂಕಿನ ವೇಮಗಲ್ ಹೋಬಳಿಯ ಬೈರಂಡಹಳ್ಳಿ ಗ್ರಾಮದಲ್ಲಿ ಎಲ್.ಜಿ. ಫೌಂಡೇಷನ್ ವತಿಯಿಂದ ಅಳವಡಿಸಲಾಗಿರುವ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಅವರು ಮಾತನಾಡಿದರು ಗ್ರಾಮದ ಪ್ರಗತಿಯ ಸಂಕೇತವಾಗಿ ನನ್ನ ಕೈಯಿಂದ ದೀಪ ಬೆಳಗಿಸುವ ಕಾರ್ಯ ನಡೆದಿದೆ. ರಾಜಕಾರಣ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿರಬೇಕು. ಜನರ ಅಭಿವೃದ್ಧಿಗೆ ಯಾರು ಬದ್ಧರಾಗಿದ್ದಾರೆ ಎಂಬುದನ್ನು ಅರಿತು ಜನರು ಬೆಂಬಲಿಸಬೇಕು ಎಂದು ತಿಳಿಸಿದರು


ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಜೆಡಿಎಸ್?ಬಿಜೆಪಿ ಮೈತ್ರಿ ಪಕ್ಷಗಳು ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸಲಹೆ ನೀಡಿದರು. ಲಕ್ಷ್ಮಣಗೌಡ ಅವರು ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಬೈರಂಡಹಳ್ಳಿಯಲ್ಲಿ ಬೆಳಗಿದ ಹೈಮಾಸ್ಟ್ ದೀಪ ಮೈತ್ರಿ ಹಾಗೂ ಪ್ರಗತಿಯ ಬೆಳಕಿನ ಸಂಕೇತವಾಗಿದೆ. ಜನರ ಮೇಲೆ ವಿಶ್ವಾಸವಿದ್ದು, ಯಾವುದೇ ಗೊಂದಲಕ್ಕೆ ಒಳಗಾಗದೆ ಒಗ್ಗಟ್ಟಿನಿಂದ ಜನರ ಸಹಕಾರ ಪಡೆದುಕೊಂಡರೆ ಗೆಲುವು ಸಾಧ್ಯ ಎಂದರು.


ತಮ್ಮ ಹುಟ್ಟೂರು ಅಭಿವೃದ್ಧಿ ಹೊಂದಬೇಕು ಹಾಗೂ ಗ್ರಾಮಸ್ಥರಿಗೆ ಉತ್ತಮ ಮೂಲಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಲಕ್ಷ್ಮಣಗೌಡ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಗ್ರಾಮಗಳಿಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಯುವಕರಿಗೆ ವಾಲಿಬಾಲ್ ಸೆಟ್ ನೀಡಿದರು ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ವಿ.ಕೃಷ್ಣಾರೆಡ್ಡಿ, ಬಣಕನಹಳ್ಳಿ ನಟರಾಜ್, ಗ್ರಾಮದ ಮುಖಂಡರಾದ ಉಷಾ, ಹನುಮಂತರೆಡ್ಡಿ, ಕೆಂದೆಟ್ಟಿ ವೆಂಕಟೇಶ್, ಕುಮಾರಾಚಾರಿ, ಬಿ.ಆರ್.ಎನ್. ನವೀನ್‌ಗೌಡ, ನಾಗೇಶ್, ಲೋಕೇಶ್, ಮರಿಯಪ್ಪ, ವೆಂಕಟೇಶ್, ಬಿ.ಕೆ.ಎನ್. ನವೀನ್‌ಗೌಡ, ಜಯರಾಂ, ಬಚ್ಚೇಗೌಡ, ದೇವರಾಜಣ್ಣ, ಬಡಗಮ್ಮನೂರು ನಾರಾಯಣಸ್ವಾಮಣ್ಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.