
ಕಲಬುರಗಿ,ಆ.18-ನಗರದ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸುಮಾರು 26 ದಾರಿದೀಪದ 11 ಕಂಬಗಳಿಗೆ ಬಲ್ಪ್ಗಳನ್ನು ಅಳವಡಿಸಿ ಬೆಳಕು ಕಲ್ಪಿಸಿದರೆ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಹಾಗೂ ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ವಿವಿಧೆಡೆ ಬಸ್ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಪವನ್ಕುಮಾರ ಬಿ.ವಳಕೇರಿ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕದ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಪ್ರಸ್ತುತ ಈ ರಸ್ತೆಯ ಬಹುತೇಕ ಭಾಗ ಕತ್ತಲೆಯಿಂದ ಕೂಡಿರುವುದರಿಂದ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ಕತ್ತಲಿನ ಪ್ರಯೋಜನ ಪಡೆದು ರಾಬರಿ, ದರೋಡೆ ಸೇರಿದಂತೆ ಇತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದ್ದು, ಇಂತಹ ಘಟನೆಗಳು ಸಂಭವಿಸಿದಲ್ಲಿ ಸಾರ್ವಜನಿಕರ ಜೊತೆಗೆ ಪೆÇಲೀಸ್ ಇಲಾಖೆಯವರಿಗೂ ಹೆಚ್ಚುವರಿ ತೊಂದರೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ಇರುವ ದಾರಿದೀಪದ ಕಂಬಗಳಿಗೆ ಕೂಡಲೇ ಬಲ್ಪ್ಗಳನ್ನು ಅಳವಡಿಸಿ ಬೆಳಕು ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಈಗಾಗಲೇ ತಿಳಿಸಿದ್ದರೂ, ಈವರೆಗೆ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ದಾರಿದೀಪದ ವ್ಯವಸ್ಥೆ ಮಾಡಲಾಗಿಲ್ಲ. ಕೇವಲ ಪೆಟ್ರೋಲ್ ಪಂಪ್ನಿಂದ ಕೋಟನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿವರೆಗೆ ಮಾತ್ರ ದಾರಿದೀಪದ ಬೆಳಕು ಕಲ್ಪಿಸಲಾಗಿದೆ.ಆದ್ದರಿಂದ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ದಾರಿದೀಪಗಳನ್ನು ಕೂಡಲೇ ಕಾರ್ಯಗತಗೊಳಿಸಿ, ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರಿದಿದ್ದರೆ ಆ.25 ರಂದು ರಾಮ್ ಮಂದಿರ ಸರ್ಕಲ್ ಬಳಿ ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.































