
ಕಲಬುರಗಿ:ವಿವಿಧ ಹಬ್ಬ ಹರಿದಿನಗಳಲ್ಲಿ ಅನಾಚಾರವನ್ನು ಆಚರಿಸುವ ಅನಾಚಾರವನ್ನು ನಾಗರಿಕ ಸಮಾಜವು ತಡೆಹಿಡಿಯಬೇಕು ಎಂದು ಸಾಮಾಜಿಕ ಹೋರಾಟಗಾರರ ಅಲ್ಲಮ ಪ್ರಭು ನಿಂಬರ್ಗಾ ಹೇಳಿದರು.
ಅವರು ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ, ಕಲ್ಯಾಣ ಕರ್ನಾಟಕ ಜನ ಜಾಗೃತಿ ವೇದಿಕೆ, ಸ್ಲಂ ಜನರ ಸಂಘಟನೆ ರಕ್ಷಿತಾ ಇಂಟಿಗ್ರೇಡ್ ರೂರಲ್ & ಅರ್ಬನ್ ಡೆವಲಪ್ಮೆಂಟ್ ಸೂಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದ ನಿಮಿತ್ತ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು ವಿತರಣೆ ಮಾಡುತ್ತಾ ಎಷ್ಟೋ ಅನಾಥ ಮಕ್ಕಳು, ಮಾನವರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಅಂತಹವರನ್ನು ಗುರುತಿಸಿ ಹಾಲು, ಹಣ್ಣು, ಉಪಹಾರ ನೀಡಬೇಕು ಅದರ ಬದಲು ಕೆಲವೊಂದು ಅನಾಚಾರದಿಂದ ಹುತ್ತಿಗೆ, ಕಲ್ಲಿಗೆ ಹಾಲು ಎರೆಯುವುದು ಮೂಢತನದಿಂದ ಕೂಡಿದೆ ಪದ್ದತಿಯಾಗಿದೆ ಎಂದು ಹೇಳುತ್ತಾ ಲಕ್ಷಗಟ್ಟಲೇ ಹಾಲು ಮಣ್ಣುಪಾಲು ಮಾಡುವುದು ನಿಜಕ್ಕೂ ದುರ್ದೈವದ ಸಂಗತಿ. ದೇವರ ಹೆಸರನಲ್ಲಿ ಅನಾಚಾರ ನಡೆಸುವುದು ಸರಿಯಲ್ಲ ಅದೇ ದೇವರ ಹೆಸರನಲ್ಲಿ ಬಡವರಿಗೆ ಹಣ್ಣು, ಹಾಲು ಕೊಟ್ಟರೇ ದೇವರಿಗೆ ಮೆಚ್ಚುಗೆಯಾಗಬಹದು ಅದು ಬಿಟ್ಟು ಬೇಕಾ ಬಿಟ್ಟಿಯಾಗಿ ಅನರ್ಥ ಆಚರಣೆ ಮಾಡುವುದು ಸರಿಯಲ್ಲವೆಂದು ಹೇಳಿದರು.
2018 ರಲ್ಲಿ ಗದಗಿನ ಶ್ರೀ ಸಿದ್ದಲಿಂಗ ಶಿವಯೋಗಿ ಸ್ವಾಮಿಗಳು ಇಂತಹ ಅನಾಚಾರದ ಪದ್ದತಿ ವಿರುದ್ಧ ಅನಾಥ ಮಕ್ಕಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ ನಾವು ಎಲ್ಲರೂ ಇದಕ್ಕೆ ಬದ್ದರಾಗಿ ನಾಗರಿಕ ಸಮಾಜ ಒಪ್ಪುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರಣ್ಣ ಐನಾಪೂರ, ಸುರೇಶ್ ಕಟ್ಟಿಮನಿ, ಸಂಜೀಕುಮಾರ ಕಾಂಬಳೇ, ಪತ್ರಕರ್ತರಾದ ಚಿದಾನಂದ ರೂಲೆ, ಮಲ್ಲಿಕಾರ್ಜುನ್ ಕೆರಮಗಿ, ಅರುಣಕುಮಾರ ತವಡೆ, ಲಕ್ಷ್ಮಣ ಪಾಳಾ, ಸಂತೋಷ ಜಾಧವ, ಸುಮಿತ ಕಾಂಬಳೆ, ಬ್ರಹ್ಮಾನಂದ ಮಿಂಚ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.































