ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಧಾರವಾಡ ಶಹರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೯ ಸರಸ್ವತಪುರ ಶಾಲೆಯ ವಿದ್ಯಾರ್ಥಿಗಳು ವೀರ ಸಂಗೋಳ್ಳಿ ರಾಯಣ್ಣ ನಾಟಕ ಪ್ರದರ್ಶಿದರು. ಘೊಸಾವಿ, ಹಿಂದಿ, ತೆಲಗು, ಮರಾಠಿ, ಉರ್ದು ಹೀಗೆ ವಿವಿಧ ಮಾತೃ ಭಾಷೆ ಹೊಂದಿದ ಮಕ್ಕಳು ನಾಟಕವನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ, ಶಾಲೆಯ ಪ್ರಧಾನ ಗುರುಮಾತೆ ಬಿ.ಎಸ್.ಹಲಕುರ್ಕಿ ಸೇರಿದಂತೆ ಇತರರು ಇದ್ದರು.