
ಹುಬ್ಬಳ್ಳಿ,ಆ೧೮: ನಗರದ ಕೊಪ್ಪಿಕರ್ ರಸ್ತೆಯ ವಿಕ್ಟೋರಿಯಾ ರಸ್ತೆಯಲ್ಲಿರುವ ಶ್ರೀ ಪದ್ಮಾ ಮಾಲ್‌ನಲ್ಲಿರುವ ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ವಿಶ್ವಾಸಾರ್ಹ ಆಭರಣ ಸಂಸ್ಥೆ ‘ಸುಲ್ತಾನ್ ಡೈಮಂಡ್ ಮತ್ತು ಗೋಲ್ಡ್’ ವತಿಯಿಂದ ‘ವಿಶ್ವ ವಜ್ರ ಡೈಮಂಡ್ ಎಕ್ಸಿಬಿಶನ್’ (೩ನೇ ಆವೃತ್ತಿ) ಮೇಳ ಶುಕ್ರವಾರ ಅದ್ದೂರಿಯಾಗಿ ಆರಂಭಗೊAಡಿತು.
ಆ. ೩೧ರವರೆಗೆ ಸಾರ್ವಜನಿಕರಿಗೆ ಉಚಿತವಾಗಿರುವ ಈ ಪ್ರದರ್ಶನವನ್ನು ಸ್ವರ್ಣ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗರುಪಾಟೆ ವಿ.ಎಸ್.ವಿ. ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹುಬ್ಬಳ್ಳಿ ಆಭರಣ ಮಳಿಗೆಯ ಮುಖ್ಯಸ್ಥರಾದ ಅಲಿ ಭಾಯಿ ಹಾಗೂ ತೌಸೀಫ್ ಅಹಮದ್ ಎಲ್ಲ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಮೊಹ್ರಾ ಸ್ಟೀಲ್ ಇಂಡಸ್ಟಿç & ನವಾಸಿನ್ ಸ್ಟೀಲ್ ಇಂಡಸ್ಟಿç ಮಾಲಿಕರಾದ ನಜೀಬುರ್ ರೆಹಮಾನ್ ಖಾನ್ ಕಿತ್ತೂರ ಹಾಗೂ ನರ್ಗೀಸ್ ಬಾನು ಎನ್. ಕಿತ್ತೂರ ದಂಪತಿ, ಶಿಗ್ಗಾಂವಿಯ ಪಾಟೀಲ ಕನ್‌ವೆನ್‌ಶನ್ ಹಾಲ್ ಮಾಲಕರಾದ ಸಿದ್ಧಾರ್ಥ ಪಾಟೀಲ ದಂಪತಿ, ಎಸ್ಕೆ ಡೆವಲಪರ್ಸ್ ವ್ಯವಸ್ಥಾಪಕ ಪಾಲುದಾರರಾದ ಸಲೀಮ ಬೇವಿನಹಳ್ಳಿ, ಶಿಗ್ಗಾಂವಿಯ ಡಾ. ನಿಜಾಮುದ್ದೀನ್ ಮುಲ್ಲಾ, ಎಂ.ಜಿ. ಗ್ರೂಪ್ ನಿರ್ದೇಶಕ ಅಬ್ದುಲ್ ಮುನಾಫ್ ತಹಶೀಲ್ದಾರ್, ಡಾ.ಆರ್.ಎನ್. ಬೆಂಚಿಹಳ್ಳಿ ಹಾಗೂ ಡಾ.ಜಿ.ಆರ್. ಬೆಂಚಿಹಳ್ಳಿ, ಪೊಲೀಸ್ ಇನ್‌ಸ್ಪೆಕ್ಟರ್ ಆಂಜನೇಯ, ಬಿಲ್ಡರ್ ರಹಮಾನ್ ಅಹ್ಮದ್ ಮತ್ತು ಹಮೀದಾ ಬೇಗಂ ದಂಪತಿ ಕರ್ನಾಟಕ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ರಹೀಮ್, ಅಬ್ದುಲ್ ರವೂಫ್, ಜನರಲ್ ಮ್ಯಾನೇಜರ್ ರಿಯಾಜ್ ಅಹಮದ್, ರೀಜನಲ್ ಮ್ಯಾನೇಜರ್ ಉಣ್ಣಿತ್ತಾನ್, ಹುಬ್ಬಳ್ಳಿ ಸ್ಟೋರ್ ಹೆಡ್ ಸುಮೇಶ ಮುಂತಾದವರು ಉದ್ಘಾಟನೆಗೆ ಸಾಕ್ಷಿಯಾದರು.
ಎ.ವಿ. ದೇಸಾಯಿ ಅವರ ಹಳೆಯ ಹಾಡುಗಳ ರಸಧಾರೆ ಪ್ರದರ್ಶನ ಮತ್ತಷ್ಟು ಕಳೆಗಟ್ಟುವಂತೆ ಮಾಡಿತು.
ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಪ್ರತಿಯೊಂದು ವಜ್ರಾಭರಣ ಖರೀದಿಯ ಒಟ್ಟು ಮೊತ್ತದ ಮೇಲೆ ಶೇ. ೨೦ ರವರೆಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಹುಬ್ಬಳ್ಳಿ ಸ್ಟೋರ್ ಹೆಡ್ ಅಲಿ ಭಾಯಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸುಲ್ತಾನ್ ಮಳಿಗೆಯ ೭೭೯೫೫೩೫೯೧೬, ೦೮೩೬-೨೦೦೪೯೧೬ ಸಂಖ್ಯೆಗಳಿಗೆ ಕರೆ ಮಾಡಬಹುದು.































