
ಲಕ್ಷೆ÷್ಮÃಶ್ವರ ಪಟ್ಟಣದ ಹಳೆ ಬಸ್ ನಿಲ್ದಾಣ ಸಮೀಪವಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ೮೦ನೆಯ ಸ್ವಾತಂತ್ರೊ÷್ಯÃತ್ಸವದ ಅಂಗವಾಗಿ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾಗಡಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಭೀಮಪ್ಪ ಉಪ್ಪಾರ್, ಮುಖಂಡರಾದ ಡಾಕ್ಟರ್ ಪ್ರಕಾಶ ಹೊಸಮನಿ, ಶಿವನ ಗೌಡ್ರು ಅಡ್ರಕಟ್ಟಿ, ದ್ಯಾಮಣ್ಣ ಕಮತದ, ನಾಗರಾಜ್ ಚಿಂಚಲಿ, ಶಂಕ್ರಣ್ಣ ಬ್ಯಾಡಗಿ, ನಿಂಬಣ್ಣ ಮಡಿವಾಳರ, ಚಂದ್ರು ಮಾಗಡಿ, ನಾಗಪ್ಪ ಓಂಕಾರಿ ಸೇರಿದಂತೆ ಅನೇಕರಿದ್ದರು.































