Home ಜಿಲ್ಲೆ ಕಲಬುರಗಿ ಅಧ್ಯಾಪಕರು ವಿದ್ಯಾರ್ಥಿಗಳ ಆದರ್ಶ ಪ್ರಾಯ ಮಾರ್ಗ ದರ್ಶಕರು: ತಹಸೀಲ್ದಾರ ಅಂಜುಮ್ ತಬಸ್ಸುಮ್

ಅಧ್ಯಾಪಕರು ವಿದ್ಯಾರ್ಥಿಗಳ ಆದರ್ಶ ಪ್ರಾಯ ಮಾರ್ಗ ದರ್ಶಕರು: ತಹಸೀಲ್ದಾರ ಅಂಜುಮ್ ತಬಸ್ಸುಮ್

ಜೇವರ್ಗಿ: ಅಧ್ಯಾಪಕರು ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯರಾದ ಮಾರ್ಗ ದರ್ಶಕರಾಗಿರಬೇಕು. ಕಾಲದಿಂದ ಕಾಲಕ್ಕೆ ಆಗುವ ಬದಲಾವಣೆಗೆ ತಕ್ಕಂತೆ ನವೀಕರಣ ಗೊಳ್ಳುವದು ಅತ್ಯಂತ ಅವಶ್ಯಕವಿದೆ. ಅಧ್ಯಾಪಕರನ್ನು ಮತ್ತಷ್ಟು ಭೋಧನಾ ವೃತ್ತಿಯಲ್ಲಿ ಸಶಕ್ತರನ್ನಾಗಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಜೇವರ್ಗಿಯ ತಾಲೂಕಾ ದಂಡಾಧಿಕಾರಿ ತಹಸೀಲ್ದಾರರಾದ ಅಂಜುಮ್ ತಬಸ್ಸುಮ್ ಹೇಳಿದರು.
ಅವರು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ಒಂದು ವಾರದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಧ್ಯಾಪಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರೆದು ಮಾತ ನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕೆಸಿಎಸ್‍ಆರ್, ಒತ್ತಡ ನಿರ್ವಹಣೆಯಂಥ ಒಳ್ಳೆಯ ಶೀರ್ಷಿಕೆಗಳನ್ನು ಇಟ್ಟುಕೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿ, ತಮ್ಮ ಬೋಧನಾ ಅವಧಿಯ ದಿನಗಳನ್ನು ಮೆಲಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಾ ಅಸ್ಟಿಗೆ ಮಾತನಾಡಿ ಅಧ್ಯಾಪಕ ರು ಈ ಕಾರ್ಯಕ್ರಮ ವನ್ನು ಸದುಪಯೋಗ ಪಡಿಸಿಕೊಂಡು ಭೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ತಿಳಿಸಿದರು.
ಐಕ್ಯೂಏಸಿ ಸಂಯೋಜಕ ಡಾ. ಸಂದೀಪ ತಿವಾರಿ ಸ್ವಾಗತಿಸಿದರು. ಹಿಂದಿ ಅಧ್ಯಾಪಕ ಕುಪೇಂದ್ರ ರಾಠೋಡ ನಿರೂಪಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ ವಂದಿಸಿದರು.ಈ ಸಂದರ್ಭದಲ್ಲಿ ಐಕ್ಯೂಏಸಿ ಸಹ ಸಂಯೋಜಕ ರವೀಂದ್ರ ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.