
ಕಲಬುರಗಿ,ಆ.8-ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2025-26ನೇ ಸಾಲಿನ 2ನೇ ಕಂತಿನ ಹಣ ಜಿಲ್ಲೆಯ ಬಹಳಷ್ಟು ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕೆಲವರಿಗೆ ಕೇವಲ ನೂರಾರು ರೂಪಾಯಿ ಅಲ್ಪ ಮೊತ್ತ eಮೆಯಾಗಿದೆ. ಸರ್ಕಾರವೇ ಅತಿವೃಷ್ಟಿಯಿಂದ ಬೆಳೆ ಹಾನಿ ಪರಿಶೀಲಿಸಿ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ನಿಯಮದಂತೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದ್ದು, ಕೆಲವು ರೈತರಿಗ ಅಲ್ಪ ಮೊತ್ತದ ಹಣ ಜಮೆ ಯಾಗಿರುವುದರಿಂದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಈ ಬಗ್ಗೆ ತನಿಖೆ ಆದೇಶಿಸಿ ಪುನರ್ ಪರಿಶೀಲನೆ ನಡೆಸಿ ಬೆಳೆ ವಿಮೆ ಮಾಡಿಸಿದ, ಬೆಳೆ ಹಾನಿಗೊಳಗಾದ ರೈತರಿಗೆ ನ್ಯಾಯ ಸಮ್ಮತವಾಗಿ ಬೆಳೆವಿಮೆ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ಡಾ.ಸಿದ್ರಾಮಪ್ಪಾ ಬಿ.ಪಾಟೀಲ ಧಂಗಾಪೂರ ಆಗ್ರಹಿಸಿದ್ದಾರೆ.































