Home ಜಿಲ್ಲೆ ಕಲಬುರಗಿ ಐದು ಜಾನುವಾರುಗಳ ರಕ್ಷಣೆ

ಐದು ಜಾನುವಾರುಗಳ ರಕ್ಷಣೆ

ಕಲಬುರಗಿ,ಆ.8-ನಗರದ ಸುಲ್ತಾನಪುರದಿಂದ ಗಂಜ್ ಏರಿಯಾ ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ತಾರಾಸಿಂಗ್ ಮತ್ತು ಸಿಬ್ಬಂದಿ ದಾಳಿ ನಡೆಸಿ 30 ಸಾವಿರ ರೂ.ಮೌಲ್ಯದ ಪಿಕಪ್ ವಾವನ ವಶಕ್ಕೆ ಪಡೆದು ಐದು ಜಾನುವಾರುಗಳ ರಕ್ಷಣೆ ಮಾಡಿದ್ದಾರೆ.
ಪಿಪಕ್ ವಾಹನ ಚಾಲಕನಾದ ನಗರದ ಎಂ.ಎಸ್.ಕೆ.ಮಿಲ್‍ನ ನಿವಾಸಿ ಅನಸ್ ತಂದೆ ಹಸನ್ (28) ಮತ್ತು ಜಾನುವಾರು ಮತ್ತು ವಾಹನದ ಮಾಲೀಕ ಖದೀರ್ ಚೌಕ್‍ನ ಗಫಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜಾನುವಾರುಗಳನ್ನು ಹಾನಗಲ್ ಕುಮಾರೇಶ್ವರ ಗೋಶಾಲೆಗೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.