ಕಲಬುರಗಿ: ಮುಖಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ನೂತನ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮಾಜವನ್ನು ಕಡೆಗಣಿಸಿರುವದನ್ನು ಖಂಡಿಸಿ ಇಂದು ಜಿಲ್ಲಾ ಬ್ರಾಹ್ಮಣ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪಾಂಡುರಂಗ ದೇಶಮುಖ,ಶಾಮಾಚಾರ್ಯ ಬೈಚಬಾಳ,ಹೃಷಿಕೇಶ ಚೌಡಾಪುರಕರ್,ಪ್ರಶಾಂತ ಕೊರಳ್ಳಿ,ಶ್ರೀನಿವಾಸ ದೇಸಾಯಿ,ಹೃಷಿಕೇಶ ದೇಶಮುಖ,ವಿನುತ ಜೋಶಿ,ಗೋಪಾಲಕೃಷ್ಣ ಕುಲಕರ್ಣಿ,ಮಂಜುನಾಥ ಕುಲಕರ್ಣಿ,ಡಾ.ಲಕ್ಷ್ಮೀಕಾಂತ ಮೊಹರೀರ ಅವರು ಸೇರಿದಂತೆ ಹಲವರು ಪಾಲ್ಗೊಂಡರು.