Home ಮುಖಪುಟ ಸುದ್ದಿ ‘ಎಸ್‌ಡಿಡಿಒ’ ಪಟ್ಟಿಯಲ್ಲಿ ಹೆಸರು-ಗೊಂದಲ

‘ಎಸ್‌ಡಿಡಿಒ’ ಪಟ್ಟಿಯಲ್ಲಿ ಹೆಸರು-ಗೊಂದಲ

ಬೆಂಗಳೂರು:ಕರ್ನಾಟಕದಲ್ಲಿ ನಡೆಯಲ್ಲಿರುವ ವಿಶೇಷ ಸಾಂದ್ರ ಪರಿಷ್ಕರಣೆ ಪ್ರಕ್ರಿಯೆಯಡಿ, ಮತದಾರರ ಪಟ್ಟಿಯ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಕೆಲವು ಮತದಾರರ ಹೆಸರುಗಳು ‘ಎಸ್‌ಡಿಡಿಒ’ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದ ತಕ್ಷಣ ಮತದಾರರ ಹಕ್ಕು ರದ್ದಾಗಿದೆ ಎಂದರ್ಥವಲ್ಲ; ಬದಲಿಗೆ ಪರಿಶೀಲನೆಗಾಗಿ ಕಾಯ್ದಿರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮೊದಲು ಅಧಿಕೃತ ಪೋರ್ಟಲ್‌ನಲ್ಲಿ ಅಥವಾ ನಿಮ್ಮ ವ್ಯಾಪ್ತಿಯ ಬಿಎಲ್‌ಒ ಅವರನ್ನು ಸಂಪರ್ಕಿಸಿ ಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲು ಕಾರಣವೇನು (ಗೈರುಹಾಜರಿ, ಸ್ಥಳಾಂತರ, ಮರಣ, ಅಥವಾ ನಕಲಿ) ಎಂಬುದನ್ನು ತಿಳಿಯಿರಿ.

ಅಗತ್ಯ ಇರುವ ಪ್ರಮಾಣಪತ್ರಗಳು ಹಾಗೂ ಇನ್‌ಫಾರ್ಮೇಶನ್ ಫಾರ್ಮ್ ಅನ್ನು ಸರಿಯಾದ ಮಾಹಿತಿಯೊಂದಿಗೆ ಬಿಎಲ್‌ಒ ಅಥವಾ ಚುನಾವಣಾ ನೋಂದಣಾಧಿಕಾರಿಗೆ ಸಲ್ಲಿಸಿ.ಬಿಎಲ್‌ಒ ಆಪ್‌ನಲ್ಲಿ ಆಯಾ ಅಧಿಕಾರಿಗೆ ಎಸ್‌ಡಿಡಿಒ ಪಟ್ಟಿಯಿಂದ ನಿಮ್ಮ ಫಾರ್ಮ್ ಅನ್ನು ಡಿಜಿಟೈಸ್ಡ್ ಪಟ್ಟಿಗೆ ‘ರೋಲ್‌ಬ್ಯಾಕ್’ ಮಾಡಲು ಅವಕಾಶವಿದೆ.: ಬೇರೆ ಕ್ಷೇತ್ರಕ್ಕೆ ಕಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಅಗತ್ಯ ಫಾರ್ಮ್-೬ ನೀಡಿ ಹೊಸ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

ರಸೀದಿ/ಆಕ್ನಾಲೆಡ್ಜ್‌ಮೆಂಟ್ ಪ್ರತಿ ಇದ್ದು, ಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಮಾತ್ರ ಮತದಾರರ ನೋಂದಣಿ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಗುವುದು ಎಂದು ಆಯೋಗ ತಿಳಿಸಿದೆ.