Home ಜಿಲ್ಲೆ ಕಲಬುರಗಿ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ: ಸದಸ್ಯತ್ವಕ್ಕೆ ಮನವಿ

ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ: ಸದಸ್ಯತ್ವಕ್ಕೆ ಮನವಿ

ಕಲಬುರಗಿ,ಜು.23-ಕರ್ನಾಟಕ ಛಾಯಾಚಿತ್ರ-ಗ್ರಾಹಕರ ಸಂಘದ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳ ಸಹಯೋಗದಲ್ಲಿ ಛಾಯಾಗ್ರಾಹಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ‘ಕೆಪಿಎ ಆಸರೆ ಯೋಜನೆ’ ಜಾರಿಗೆ ತರಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಫೆÇೀಟೊಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ.ತೋಟದ ತಿಳಿಸಿದರು.
‘ಅಸೋಸಿಯೇಷನ್ ಸದಸ್ಯರು ಸ್ಥಳೀಯ ಸಂಘದಲ್ಲಿ ಸದಸ್ಯರಾದ ಛಾಯಾಗ್ರಾಹಕರು ಇದಕ್ಕೆ ಅರ್ಹರು. ಕೆಪಿಎ ಆಸರೆ ಯೋಜನೆಗೆ 110 ಶುಲ್ಕ ನೀಡಿ, ಸದಸ್ಯತ್ವ ಪಡೆಯಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ನಿಧನ ಹೊಂದಿದರೆ ಅವರ ಕುಟುಂಬದ ನಾಮಿನಿಗೆ ಈ ಯೋಜನೆಯಡಿ 1 ಲಕ್ಷ ಆರ್ಥಿಕ ಸಹಾಯಧನ ದೊರೆಯಲಿದೆ.
‘ರಾಜ್ಯದಾದ್ಯಂತ 10 ಸಾವಿರ ಛಾಯಾಗ್ರಾಹಕ ಸದಸ್ಯರನ್ನು ಯೋಜನೆಯಡಿ ಸೇರಿಸುವ ಉದ್ದೇಶ ಇದೆ. ಆಗಸ್ಟ್ 19ರ ವರೆಗೆ ಸದಸ್ಯತ್ವ ಅಭಿಯಾನ ಇರುತ್ತದೆ. ಬಳಿಕ ಈ ಯೋಜನೆ ಜಾರಿಗೆ ಬರುತ್ತದೆ. ಯಾರಾದರೂ ನಿಧನ ಹೊಂದಿದ ಸಂದರ್ಭದಲ್ಲಿ ಪ್ರತಿ ಸದಸ್ಯನಿಂದ 10 ದೇಣಿಗೆ ಪಡೆದು ಕುಟುಂಬದ ನಾಮಿನಿಗೆ ಚೆಕ್ ಮುಖಾಂತರ 12 ದಿನದೊಳಗೆ ತಲುಪಿಸಲಾಗುವುದು’ ಎಂದರು. ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಮೊ.ಅಪ್ಸರ್ ಪಟೇಲ್ ಮಾತನಾಡಿ, ‘ಜಿಲ್ಲೆಯಲ್ಲಿ 540 ಜನ ಛಾಯಾಗ್ರಾಹಕ ಸದಸ್ಯರಿದ್ದಾರೆ. ಛಾಯಾಗ್ರಾಹಕರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅವರ ಆರೋಗ್ಯ ಸಮಸ್ಯೆಗಳಿಗೂ ಆರ್ಥಿಕ ಸಹಾಯ ಮಾಡಲಾಗುವುದು’ ಎಂದರು.
ಖಜಾಂಚಿ ಶ್ರೀನಿವಾಸ ಮಡಕಿ, ಅನಿಲಕುಮಾರ, ಅಂಬದಾಸ, ಖಾಜಾ ಮೈನೋದಿನ್, ಆಕಾಶ ಪೂಜಾರಿ, ಚಂದ್ರಶೇಖರ ಬ್ಯಾಕೊಡ್, ಪ್ರಭುಲಿಂಗ, ನಾರಾಯಣ ಜೋಶಿ ಇದ್ದರು.