
ಕಲಬುರಗಿ,ಜು.23-ಸಾರ್ವಜನಿಕರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಗೂಡ್ಸ್ ವಾಹನದಲ್ಲಿ ಕಲಬುರಿಯ ಕಾಳಸಂತೆಯಲ್ಲಿ ಮಾರಾಟ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕ ನವೀನ್ ಎಂ.ಅವರು ದಾಳಿ ನಡೆಸಿದ್ದಾರೆ.
ಒಂದು ಗೂಡ್ಸ್ ವಾಹನದಲ್ಲಿ 70 ಸಾವಿರ ರೂ.ಮೌಲ್ಯದ 20 ಕ್ವಿಂಟಾಲ್ ಅಕ್ಕಿ, ಇನ್ನೊಂದು ಗೂಡ್ಸ್ ವಾಹನದಲ್ಲಿ 35 ಸಾವಿ ರೂ.ಮೌಲ್ಯದ 10 ಕ್ವಿಂಟಾಲ್ ಅಕ್ಕಿ ಸೇರಿ ಒಟ್ಟು 30 ಕ್ವಿಂಟಾಲ್ ಅಕ್ಕಿ ಮತ್ತು 1.50 ಲಕ್ಷ ರೂ.ಮೌಲ್ಯದ ಗೂಡ್ಸ್ ವಾಹನ ವಶ ಪಡಿಸಿಕೊಂಡಿದ್ದಾರೆ.
ಒಂದು ಗೂಡ್ಸ್ ವಾಹನದ ಚಾಲಕ ಪರಾರಿಯಾಗಿದ್ದು, ಇನ್ನೊಂದು ಗೂಡ್ಸ್ ವಾಹನ ಚಾಲಕನಾದ ಮೇಳಕುಂದಾ (ಕೆ) ಗ್ರಾಮದ ಶಿವಯ್ಯ ಭೀಮಯ್ಯ ಗುತ್ತೇದಾರ (34) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























