
ದಾವಣಗೆರೆ, ಜು. ೮- ದಾವಣಗೆರೆ ಜಿಲ್ಲಾ ಬಿಜೆಪಿಯ ಕೆಲ ನಾಯಕರಿಗೆ ಒಳ್ಳೆಯ ಹಾರ್ಟ್ ಸರ್ಜನ್ ಬಳಿ ತಪಾಸಣೆ ಮಾಡಿಸಬೇಕಾಗಿದೆ. ಹೃದಯಲ್ಲಿ ಎಷ್ಟು ಬ್ಲಾಕ್ ಆಗಿದೆಯೆಂದು ಹುಡುಕುವುದಕ್ಕಲ್ಲ, ಹೃದಯ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಸಲಿಕ್ಕೆ ಟೆಸ್ಟ್ ಮಾಡಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ ವೇದಿಕೆಯಿಂದಲೇ ಪಕ್ಷದ ನಾಯಕರಿಗೆ ಮಾತಿನ ಚಾಟಿ ಬೀಸಿದರು.
ನಗರದ ಶ್ರೀನಿಧಿ ಕನ್ವೆನ್ಸನ್ ಹಾಲ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಆಗೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಯಾವುದೇ ಮುಖಂಡರ ಹೆಸರನ್ನು ಹೇಳಿದರೂ ಚೆಪ್ಪಾಳೆ ಬರುತ್ತಿಲ್ಲ. ನಾನು ವೈಯಕ್ತಿಕವಾಗಿ ಯಾರಿಗೂ ಈ ಮಾತನ್ನು ಹೇಳುತ್ತಿಲ್ಲ. ಆದರೆ, ಹೃದಯ ಇದೆಯೋ, ಇಲ್ಲವೋ ಎಂಬುದನ್ನು ಹೃದ್ರೋಗ ತಜ್ಞರ ಬಳಿ ಟೆಸ್ಟ್ ಮಾಡಿಸಬೇಕಿದೆ ಎಂದರು.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕಾರ್ಯಕರ್ತರು ವಿಶ್ವಾಸ ಇಟ್ಟುಕೊಂಡಿದ್ದಾರೆ. ಉಪ ಚುನಾವಣಾ ಫಲಿತಾಂಶ ಆಡಳಿತ ಪಕ್ಷ, ವಿಪಕ್ಷಕ್ಕೆ ಮಾನದಂಡವಾಗಲು ಸಾಧ್ಯವಿಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಘೋಷಣೆ ಆದಾಗಲೇ ಸೋತಾಗಿದೆ ಎಂದು ಕೆಲವರು ತೀರ್ಮಾನ ಮಾಡಿದ್ದರು. ಆಡಳಿತ ಪಕ್ಷದವರೇ ಈ ತೀರ್ಮಾನ ಮಾಡಿದ್ದರು. ನಮ್ಮ ಮುಖಂಡರು ಇದನ್ನೂ ತೀರ್ಮಾನ ಮಾಡಿದ್ದರು. ಯಾರು ಏನೇ ತೀರ್ಮಾನ ಮಾಡಿದರೂ ನಮ್ಮ ಕಾರ್ಯಕರ್ತರು ಕಡೆಯ ಕ್ಷಣದವರೆಗೂ ಪ್ರಬಲ ಹೋರಾಟ ಮಾಡಿದ್ದನ್ನು ನಾವ್ಯಾರೂ ಮರೆಯಬಾರದು ಎಂದು ಸೂಚ್ಯವಾಗಿ ತಿಳಿಸಿದರು.
ಕಳೆದ ಚುನಾವಣೆಗಿಂತ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದೇವೆ. ದಾವಣಗೆರೆ ಜಿಲ್ಲೆಯ ಮಹಾನ್ ನಾಯಕರಲ್ಲಿ ಮನವಿ ಮಾಡುತ್ತೇನೆ. ಕಳೆದ ಉಪ ಚುನಾವಣೆಯಲ್ಲೂ ನಾನು ಹೇಳಿದ್ದೆ. ಇವತ್ತೂ ಸಹ ಹೇಳುತ್ತಿದ್ದೇನೆ. ಹಳೆಯದನ್ನೆಲ್ಲಾ ಮರೆತು, ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಹೋಗಬೇಕಾಗಿದೆ. ‘ಹೋಗಬೇಕಾಗಿದೆ. ನಾನಿಲ್ಲದೇ ಪಕ್ಷವೇ ನಡೆಯುವುದಿಲ್ಲ, ನಾನು ಹುಟ್ಟಿದ ಮೇಲೆಯೇ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಹುಟ್ಟಿದ್ದು ಎಂಬ ಭಾವನೆಯಿಂದ ಮೊದಲು ಹೊರಬನ್ನಿ ಎಂದು ಹೇಳಿದರು.
ಅಂತಹ ಭಾವನೆಯಿಂದ ನಾವು ಹೊರಗೆ ಬರದಿದ್ದರೆ ಇವತ್ತು ಕಾರ್ಯಕರ್ತರು ನಮ್ಮ ಹೆಸರು ಹೇಳಿದಾಗ ಚೆಪ್ಪಾಳೆ ತಟ್ಟುವುದನ್ನು ನಿಲ್ಲಿಸಿದ್ದಾರೆ. ನಾಳೆ ರಸ್ತೆಯಲ್ಲಿ ಓಡಾಡುವುದು ಸಹಿತ ಕಷ್ಟವಾಗುತ್ತದೆ. ಅದಕ್ಕೆ ಮುಂಚೆಯೇ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ನಾವು ಒಟ್ಟಾಗಿ ಒಂದಾಗಿ ಹೋಗಬೇಕು. ಮತದಾರರಿಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಶ್ವಾಸ ಬರುವ ಬರುವ ಮೊದಲು ಕಾರ್ಯಕರ್ತರಿಗೆ ಕಾರ್ಯಕರ್ತರಿಗೆ ವಿಶ್ವಾಸ ಬರಬೇಕಿದೆ. ಕಾರ್ಯಕರ್ತರಿಗೆ ವಿಶ್ವಾಸ ಬಂದರೆ, ಮತದಾರರಿಗೂ ವಿಶ್ವಾಸ ಬರುತ್ತದೆ. ಮೊದಲು ನೀವೆಲ್ಲರೂ ಒಂದಾಗಿ ಎಂದು ಕಿವಿಮಾತು ಹೇಳಿದರು.






























