
ಬೀದರ್: ಜು.೮:ವಚನಾಮೃತ ಕನ್ನಡ ಸಂಘದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜುಲೈ ೧೦ ರಂದು ಮಹಾನುಭಾವಿ ಅಲ್ಲಮಪ್ರಭು ದೇವರು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ಸಮಾರಂಭದಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದ್ದಾರೆ.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ, ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸುವರು ಎಂದು ಹೇಳಿದ್ದಾರೆ.
ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಪ್ರಮುಖರಾದ ಮಲ್ಲಿಕಾರ್ಜುನ ಹತ್ತಿ, ಹಾವಶೆಟ್ಟಿ ಪಾಟೀಲ, ತರುಣ್ ನಾಗಮಾರಪಳ್ಳಿ, ಜೈರಾಜ್ ಖಂಡ್ರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹುಬ್ಬಳ್ಳಿಯ ಸಾಹಿತಿ ಡಾ. ಶ್ಯಾಮಸುಂದರ ಬೀದರಕುಂದಿ ಆಶಯ ನುಡಿ ಆಡುವರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಪ್ರಾಸ್ತಾವಿಕವಾಗಿ ಮಾತನಾಡುವರು. ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ೨ಕ್ಕೆ ನಡೆಯುವ ವಿಚಾರ ಸಂಕಿರಣ ೧ ರ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕಿ ಡಾ. ಭಾಗೀರಥಿ ಕೊಂಡಾ ವಹಿಸುವರು. ಹರಿಹರ ಹಾಗೂ ಚಾಮರಸರ ಕಾವ್ಯಗಳಲ್ಲಿ ಅಲ್ಲಮ ಕುರಿತು ಕಲಬುರಗಿಯ ಡಾ. ಶ್ರೀಶೈಲ ನಾಗರಾಳ, ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಕುರಿತು ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಹಾಗೂ ಅಲ್ಲಮಪ್ರಭು ದೇವರ ಆಧ್ಯಾತ್ಮಿಕ ಚಿಂತನೆ ಕುರಿತು ಡಾ. ಶಿವಲಿಂಗ ಹೇಡೆ ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.
ಡಾ. ಶರಣಯ್ಯ ಸ್ವಾಮಿ, ಡಾ. ರಾಜಶೇಖರ ಪಾಟೀಲ ಹಾಲಹಳ್ಳಿ, ಪ್ರವೀಣಕುಮಾರ ಭಗಾಲೆ, ರವೀಂದ್ರ ಮಾಸಿಮಾಡೆ, ಮಲ್ಲಿಕಾರ್ಜುನ ಅಲ್ಲಾಪುರೆ, ಅನಿಲಕುಮಾರ ಪಾಟೀಲ, ಗಿರೀಶ್ ಖೇಣಿ, ಕಲ್ಯಾಣರಾವ್ ಚಳಕಾಪುರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ೩.೩೦ಕ್ಕೆ ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ೨ ನಡೆಯಲಿದೆ. ಡಾ. ಡಿ.ಆರ್. ನಾಗರಾಜ ಅವರ ಕಣ್ಣೋಟದಲ್ಲಿ ಅಲ್ಲಮ ಪ್ರತಿಭೆ ಕುರಿತು ಡಾ. ವಿಕ್ರಮ ವಿಸಾಜಿ, ಅಲ್ಲಮರ ವಚನಗಳಲ್ಲಿ ಅನುಭಾವ ಕುರಿತು ಡಾ. ಕಾವ್ಯಶ್ರೀ ಮಹಾಗಾಂವಕರ್ ಹಾಗೂ ಕನ್ನಡ ನಾಟಕಗಳಲ್ಲಿ ಅಲ್ಲಮ ಕುರಿತು ಬೆಳಗಾವಿಯ ಡಾ. ಡಿ.ಎಸ್. ಚೌಗುಲೆ ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.
ಪ್ರಮುಖರಾದ ವಿಜಯಕುಮಾರ ಸೋನಾರೆ, ಡಾ. ಸಂಗಮೇಶ ವಟಗೆ, ಪ್ರೊ. ಬಿ.ಎಂ. ಬಿರಾದಾರ, ವೀರಶೆಟ್ಟಿ ಬಾವಗೆ, ಕೆ. ಸತ್ಯಮೂರ್ತಿ, ಗುರುಸಿದ್ದಪ್ಪ ಬಿರಾದಾರ, ಅಶೋಕ ಬೋಗಾರ್ ಹಾಗೂ ರಘುನಾಥ ಭೂರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಸಂಜೆ ೫ಕ್ಕೆ ಜರುಗುವ ವಿಚಾರ ಸಂಕಿರಣ ೩ ರ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ ವಹಿಸುವರು. ಅಲ್ಲಮರ ವಚನಗಳ ನಿರ್ವಚನ ಕುರಿತು ಡಾ. ಜಗದೇವಿ ಮೈನಾಳೆ, ಭಗವಂತಪ್ಪ ಅಣ್ಣೆಪ್ಪನೋರ ಹಾಗೂ ರೇಣುಕಾ ಎನ್.ಬಿ. ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.
ಪ್ರಮುಖರಾದ ಸಿದ್ರಾಮ ಸಪಾಟೆ, ಬಸವರಾಜ ಬೆಳಕುಣೆ, ಸಂಗಮೇಶ ನಾಸಿಗಾರ್, ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಲೋಕೇಶ ಉಡಬಾಳೆ, ಅನುಸೂಯಾ ಕಾಳೆ, ಸುನಿತಾ ದಾಡಗೆ, ಸಿದ್ದಣ್ಣ ಚೌಧರಿ, ಸವಿತಾ ಪಾಟೀಲ ಹಾಗೂ ಜ್ಯೋತಿ ಕಮಠಾಣೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾAಬಿಕೆ ಅಕ್ಕ ದಿವ್ಯ ಸಾನಿಧ್ಯ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಭಾರತಿ ವಸ್ತ್ರದ್ ಸಮಾರೋಪ ನುಡಿ ಆಡುವರು ಎಂದು ಹೇಳಿದ್ದಾರೆ.
ಪ್ರಮುಖರಾದ ರಾಜಶೇಖರ ಮಂಗಲಗಿ, ಜಯದೇವಿ ಯದಲಾಪುರೆ, ಪಾರ್ವತಿ ಸೋನಾರೆ, ಡಾ. ದೇವಕಿ ನಾಗೂರೆ, ಅಶೋಕ ಬೂದಿಹಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.



























