
ಸಂಜೆವಾಣಿ ವಾರ್ತೆ
ಕೆ ಆರ್.ನಗರ,ಜು.03:- ಸಾಲಿಗ್ರಾಮ ತಾಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ತಂದ್ರೆ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ ರವಿಶಂಕರ್ ಗುದ್ದಲಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ ತಂದ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗುಪ್ಪೆ, ಕುಪ್ಪಳ್ಳಿ, ತಂದ್ರೆ ಅಂಕನಹಳ್ಳಿ, ತಂದ್ರೆ, ತಂದ್ರೆ ಕೊಪ್ಪಲು ಗ್ರಾಮದಲ್ಲಿ ಗ್ರಾಮ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕೆಲವು ಸಮಸ್ಯೆಗಳಿಗೆ ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.
ಕುಪ್ಪಳ್ಳಿ ಗ್ರಾಮದಲ್ಲಿ ಸುಮಾರು 15 ಕೋಟಿ ರೂ ವೆಚ್ಚದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಸರ್ಕಾರದಿಂದ ಮಂಜೂರಾಗಿದ್ದು ಆ ಹಣವನ್ನು ಪೆÇೀಲಾಗಲು ನಾನು ಬಿಡುವುದಿಲ್ಲ ಹಾಗಾಗಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸ ಬೇಕಾಗಿರುವುದರಿಂದ ಶಾಲೆಯನ್ನು ಅರಕೆರೆಗೆ ವರ್ಗಾಯಿಸಲಾಗಿದೆ ಎಂದರು.
ಈಗ ಆಗಿರುವ ಸಮಸ್ಯ ಬಗ್ಗೆ ಗ್ರಾಮಸ್ಥರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಆ ಬಗ್ಗೆ ವಿವರಣೆಯನ್ನು ನೀಡಿದ ಶಾಸಕ ಡಿ ರವಿಶಂಕರ್ ಶಾಲೆ ನಿರ್ಮಿಸಲು ಗುರುತಿಸಿರುವ ಜಾಗದಲ್ಲಿ ಸುಮಾರು ವರ್ಷಗಳ ಹಿಂದೆಯೇ ಗಿಡಗಳನ್ನು ನೆಟ್ಟಿದ್ದು ಅವು ಈಗ ಎಮ್ಮಾರವಾಗಿ ಬೆಳೆದಿರುವುದರಿಂದ ಅದು ಪರಿಭಾವಿತ ಅರಣ್ಯವಾಗಿದೆ ( ಡೀಮ್ ಫಾರೆಸ್ಟ್ ) ಆದಕಾರಣ ಆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾಡುಗಳನ್ನು ಕಡೆಯಲು ಅನುಮತಿ ಇಲ್ಲ, ಆ ಕಾರಣದಿಂದ ಬೇರೆ ಮಾರ್ಗವಿಲ್ಲದೆ ಶಾಲೆಯನ್ನು ಅರಕೆರೆ ಗ್ರಾಮದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಕುಪ್ಪಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಶಾಸಕರು ಕುಪ್ಪಹಳ್ಳಿ ಗ್ರಾಮದ ಯಜಮಾನರು ಹಾಗೂ ಗ್ರಾಮಸ್ಥರು ಚರ್ಚಿಸಿ ಇನ್ನು 20 ದಿನದ ಒಳಗಾಗಿ ಸೂಕ್ತ ಸ್ಥಳವನ್ನು ಗುರುತಿಸಿ ಕೊಟ್ಟಲ್ಲಿ ಇಂದಿರಾಗಾಂಧಿ ವಸತಿ ಶಾಲೆಯನ್ನು ಕುಪ್ಪಹಳ್ಳಿ ಗ್ರಾಮದಲ್ಲಿಯೇ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಪಿ ರಮೇಶ್ ಕುಮಾರ್, ಕೆ ಆರ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ತಾ.ವಕ್ತಾರ ಸೈಯದ್ ಜಾಬೀರ್, ಆಪ್ತ ಸಹಾಯಕ ನವೀನ್, ಸಾಲಿಗ್ರಾಮ ತಹಸಿಲ್ದಾರ್ ರುಕ್ಕಿಯ ಬೇಗಂ, ಇಓ.ರವಿಕುಮಾರ್, ಸಾಲಿಗ್ರಾಮ ಪೆÇಲೀಸ್ ಇನ್ಸ್ಪೆಕ್ಟರ್ ಶಶಿಕುಮಾರ್, ಅರಣ್ಯ ಇಲಾಖೆಯ ಆರ್ ಎಫ್ ಗಳಾದ ಹರಿಪ್ರಸಾದ್, ಮಂಜು, ಬಿ ಇ ಓ ಕೃಷ್ಣಪ್ಪ, ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕ ರಾಮು, ಕೃಷಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಗೋವಿಂದರಾಜು ಯಾದವ್, ಸಿಡಿಪಿಓ ಅಣ್ಣಯ್ಯ, ಲೋಕೋಪಯೋಗಿ ಇಲಾಖೆಯ ಸಿದ್ದೇಶ್ವರ ಪ್ರಸಾದ್, ಅಕ್ಷರ ದಾಸೋಹದ ಉಪ ನಿರ್ದೇಶಕ ಸ್ವಾಮಿ ಗೌಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.



























