
ಸೈದಾಪುರ:ಜೂ.೧೫:ವರ್ಗಾವಣೆಗೊಂಡ ಶರಣಬಸಪ್ಪ ಮುಖ್ಯ ಶಿಕ್ಷಕರ ನಿಸ್ವಾರ್ಥ ಸೇವೆ ಹಾಗೂ ಮಾರ್ಗದರ್ಶನ ಇತರರಿಗೆ ಮಾದರಿಯಾಗಿದೆ ಎಂದು ಬಿಆರಪಿ ವಿಜಯಕುಮಾರ್ ಅಭಿಪ್ರಾಯಪಟ್ಟರು.
ಸಮೀಪದ ರಾಚನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ತೆರೆದ ಮನಸ್ಸಿನಿಂದ, ಪರಸ್ಪರ ನಂಬಿಕೆ ಮತ್ತು ಗೌರವ ಭಾವದಿಂದ ಸೇವೆ ಆರಂಭಿಸಿದರೆ ಕಲಿಕೆಯ ಗುಣಮಟ್ಟ ಸರಳವಾಗಿ ಹೆಚ್ಚಿಸಬಹುದು. ಶರಣಬಸಪ್ಪ ಅವರು ಶಿಸ್ತಿನ ಸಿಪಾಯಿಗಳು. ಪರಿಸರ ಪ್ರೇಮಿಗಳು, ಸಮಯ ಪಾಲಕರು. ಅವರ ಸೇವೆ ಹೊಸ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.
ಸನ್ಮಾನಿತರಾಗಿ ಶರಣಬಸಪ್ಪ ಮಾತನಾಡಿ, ಮಕ್ಕಳು ಚೆನ್ನಾಗಿ ಓದಬೇಕು, ವಿದ್ಯಾವಂತರಾಗಬೇಕು, ಶಿಸ್ತಿನಿಂದರಬೇಕು, ಸಮಯ ಪಾಲನೆ ಮಾಡಬೇಕು. ಗುರುಗಳು ಹೇಳಿದ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ತಂದೆ ತಾಯಿಗಳಿಗೆ ಲಿಸಿದ ಗುರುಗಳಿಗೆ ಗೌರವ ಕೊಡಬೇಕು ಎಂದರು. ಶಾಲಾ ಮಕ್ಕಳಿಗೆ ಬ್ಯಾಗು, ಪುಸ್ತಕ, ಪೆನ್ನು ಉಡುಗೊರೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಸಿಆರಪಿಗಳಾದ ಷಣ್ಮುಖಪ್ಪ , ಲಿಂಗಾರೆಡ್ಡಿ , ಸುಬ್ರಹ್ಮಣ್ಯ, ಲಿಂಗನಗೌಡ, ಶ್ರೀನಿವಾಸ್, ದೇವೇಂದ್ರಪ್ಪ ಗೌಡ, ಮಲ್ಲನಗೌಡ, ಸಿದ್ದಲಿಂಗ ರೆಡ್ಡಿ, ದೇವಪ್ಪ ಗೌಡ ಕಲಾಲ್, ಮೋಹನ್ ರೆಡ್ಡಿ ಗೌಡ, ಎಸಡಿಎಂಸಿ ಅಧ್ಯಕ್ಷ ರವೀಂದ್ರ ರೆಡ್ಡಿ, ಹಣಮಂತ ಕೋರಿಯಾಳ್, ಸಾಹೇಬ್ ಗೌಡ ಕಲಾಲ್, ಗಂಗಪ್ಪ ಮಡಿವಾಳ, ರುದ್ರಗೌಡ, ವಿಶ್ವನಾಥ್ ರೆಡ್ಡಿ, ಪ್ರಕಾಶ್ ಯರ್, ಬಸವರಾಜ್ ಕಲಾಲ್, ಬಸವರಾಜ್ ಪೂಜಾರಿ, ಹನುಮಂತ ಕುದ್ರಿ, ಸಿದ್ದಪ್ಪ, ಅಶೋಕ್ ರೆಡ್ಡಿ, ನಿಂಗಪ್ಪ ಪೂಜಾರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.


























