
ಕಲಬುರಗಿ,ಮೇ 29: ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಸೇಠ್ ಶಂಕರ್ ಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ, ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ, ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ -ಪ್ರಜಾಪ್ರಭುತ್ವ ಉಳಿಸಿ ವಿಷಯ ಕುರಿತು ಕಾನೂನು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು ಪ್ರಾಂಶುಪಾಲರಾದ ಡಾ.ಮಹೇಶ್ವರಿ ಎಸ್.ಹಿರೇಮಠ ಉದ್ಘಾಟಿಸಿದರು.
ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕರಾದ ಪೆÇ್ರ.ನರೇಂದ್ರ ಬಡಶೇಶಿ ಮಾತನಾಡುತ್ತಾ 1990- 96ರ ಅವಧಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್‍ಅವರು ದೇಶದಲ್ಲಿ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಶ್ರಮಿಸಿದ್ದರು. ಭಾರತ ಚುನಾವಣಾ ಆಯೋಗ ಸ್ವತಂತ್ರವಾದ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕಿರುವ ಅಧಿಕಾರ ವ್ಯಾಪ್ತಿಯನ್ನು ಟಿ.ಎನ್.ಶೇಷನ್, ರವರ ಅವಧಿಯಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಚುನಾವಣಾ ಆಯೋಗದ ವಿಶೇಷತೆ ಮತ್ತು ಜವಾಬ್ದಾರಿಯನ್ನು ದೇಶದ ಮತದಾರರಿಗೆ ತೋರಿಸಿಕೊಟ್ಟಿದ್ದರು,ಮತ್ತು ಚುನಾವಣಾ ಆಯೋಗದ ಘನತೆಯನ್ನು ಹೆಚ್ಚಿಸಿದ್ದರು .ಪ್ರತಿ ಚುನಾವಣೆ ಬಂದಾಗ ದೇಶದ ಜನತೆ ಟಿ.ಎನ್.ಶೇಷನ್‍ರನ್ನು ನೆನಪಿಸಿಕೊಳ್ಳುತ್ತಾರೆ ಎಂದರು.ನ್ಯಾಯವಾದಿ ಸಂಜೀವ ಕುಮಾರ,ಕಾರ್ಯಕ್ರಮದ ಸಂಯೋಜಕರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಯನತಾರಾ ಅಸಪಲ್ಲಿ ಮಾತನಾಡಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ.ಆರ್.ದುತ್ತರಗಿ, ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಜ್ಯೋತಿ ಕಾಡಾದಿ ,ಶಾಂತೇಶ್ವರಿ ಶಾಂತಗಿರಿ, ಕರುಣ ಪಾಟೀಲ, ರೇಣುಕಾ ದೇವರಮನಿ,ಜ್ಯೋತಿ ಹಂಕರಕಿ ಉಪಸ್ಥಿತರಿದ್ದರು.ಕಾನೂನು ವಿದ್ಯಾರ್ಥಿನಿ ಪವಿತ್ರಾ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು.























