Home ಜಿಲ್ಲೆ ಮೋದಿ ಸರ್ಕಾರದ ಪಡಿತರ ಹಂಚಿಕೆಯಲ್ಲೂ ರಾಜ್ಯ ಸರ್ಕಾರ ವಿಫಲ : ಭಗವಂತ ಖೂಬಾ

ಮೋದಿ ಸರ್ಕಾರದ ಪಡಿತರ ಹಂಚಿಕೆಯಲ್ಲೂ ರಾಜ್ಯ ಸರ್ಕಾರ ವಿಫಲ : ಭಗವಂತ ಖೂಬಾ

ಬೀದರ:ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ 81.35 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡಲು ಕೇಂದ್ರದ ಮೋದಿ ಸರ್ಕಾರ ರೂ. 11.80 ಲಕ್ಷ ಕೋಟಿ ಅನುದಾನ ಮೀಸಲಿಟ್ಟು, ದೇಶದ ಜನರಿಗೆ ಪ್ರತಿ ತಿಂಗಳು ತಪ್ಪದೆ ಅಕ್ಕಿ/ಗೊದಿ ನೀಡುತ್ತಿದೆ, ಆದರೆ ನಮ್ಮಲ್ಲಿರುವ ಭ್ರಷ್ಟ ರಾಜ್ಯ ಸರ್ಕಾರ ಕೇಂದ್ರದ ಪಡಿತರ ಸಹ ರಾಜ್ಯದ ಜನರಿಗೆ ವಿತರಿಸುವಲ್ಲಿ ವಿಫಲವಾಗಿದೆ, ಸರಿಯಾಗಿ ಸರ್ವರ್ ನಿರ್ವಹಣೆ ಮಾಡದೆ ಇರುವುದರಿಂದ ಬಡವರು ಅವರ ಪಾಲಿನ ಪಡಿತರ ಪಡೆಯಲು ತನ್ನ ಎಲ್ಲಾ ಕೆಲಸ ಕಾರ್ಯಗಳೆಲ್ಲಾ ಬಿಟ್ಟು ವಾರಗಟ್ಟಲೆ ಪಡಿತರ ಅಂಗಡಿ ಮುಂದೆ ನಿಲ್ಲುವ ಹಾಗೆ ಮಾಡುತ್ತಿದೆ, ಸದ್ಯ ರಾಜ್ಯದ ತುಂಬಾ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ, ಲಜ್ಜಗೇಟ್ಟ ರಾಜ್ಯ ಸರ್ಕಾರ ಕೂಡಲೆ ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಬಗೆಹರಿಸಿ, ರಾಜ್ಯದಲ್ಲಿರುವ ಎಲ್ಲಾ ಪಡಿತರಿಗೆ ಸದ್ಯ ಮೋದಿ ಸರ್ಕಾರದಿಂದ ನೀಡುತ್ತಿರುವ ಮೇ ಮತ್ತು ಜೂನ್ ತಿಂಗಳ ಪಡಿತರ ಸರಿಯಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅಗ್ರಹಿಸಿದ್ದಾರೆ.

ಮೋದಿ ಸರ್ಕಾರದಿಂದ ಅಂತ್ಯೋದಯ ಕಾರ್ಡನವರಿಗೆ ಪ್ರತಿ ಕಾರ್ಡಗೆ ಪ್ರತಿ ತಿಂಗಳು 35ಕೆ.ಜಿ ಅಕ್ಕಿ ಮತ್ತು ಬಿ.ಪಿ.ಎಲ್ ಕಾರ್ಡದಾರರಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ ನೀಡಲಾಗುತ್ತಿದೆ, ಸದ್ಯ ಬೆಸಿಗೆ ಇರುವ ಕಾರಣ ಮೇ ಮತ್ತು ಜೂನ್ ತಿಂಗಳ ಪಡಿತರ ಒಂದೆ ಸಮಯದಲ್ಲಿ ನೀಡಲಾಗುತ್ತಿದೆ, ಇದಕ್ಕೆ ಪ್ರತಿಯೊಬ್ಬರು 2 ಸಲ ಥಂಬ್ ಕೊಡಬೇಕಾಗುತ್ತದೆ. ಇದು ಸಂಪುರ್ಣ ಮೋದಿ ಸರ್ಕಾರದ ಆಹಾರ ಧಾನ್ಯವಾಗಿರುತ್ತದೆ, ನಿಯಮಾನುಸಾರ ಕೇಂದ್ರದ ಜೊತೆ ರಾಜ್ಯ ಸರ್ಕಾರವು ತನ್ನ ಪಾಲಿನ ಪಡಿತರ ನೀಡಬೇಕಿತ್ತು ಆದರೆ ದಿವಾಳಿ ಹಂತದಲ್ಲಿರುವ ರಾಜ್ಯ ಸರ್ಕಾರ ತನ್ನ ಪಾಲಿನ ಪಡಿತರ ಜುಲೈ ತಿಂಗಳಲ್ಲಿ ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಗಳಿಂದ ಗೊತ್ತಾಗಿದೆ, ಆದರೆ ಕೇಂದ್ರ ಸರ್ಕಾರ ನೀಡುತ್ತಿರುವ ಪಡಿತರಕ್ಕಾದರೂ ಸರ್ವರ್ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ಕುರ್ಚಿ ಕಾಳಗದಲ್ಲಿ ಬ್ಯುಸಿ ಆಗಿದ್ಧಾರೆ, ಅಧಿಕಾರಕ್ಕಾಗಿ ತನ್ನ ಜವಬ್ದಾರಿ ಮರೆತು ಕಾಂಗ್ರೇಸ್ ಕಚೇರಿಯ ಕಾವಲು ಕಾಯುತ್ತಿದ್ದಾರೆ, ಯಾರಿಗೂ ಬಡವರ ಕಷ್ಟ ಕಣ್ಣಿಗೆ ಕಾಣುತ್ತಿಲ್ಲಾ ಎಂದು ಆಕ್ರೋಷ ಹೊರಹಾಕಿದ್ದಾರೆ.

ದಿವಾಳಿಯಾಗಿರುವ ರಾಜ್ಯ ಸರ್ಕಾರದಿಂದ ಇನ್ನೇನು ನೀರಿಕ್ಷಿಸಲು ಸಾಧ್ಯ ? ಇಂತವರ ಕೈಗೆ ಅಧಿಕಾರ ಕೊಟ್ಟ ಪರಿಣಾಮ ಇಂತಹ ಸಮಸ್ಯೆಗಳು ಜನರು ಎದುರಿಸಲೇಬೇಕು ಎಂದು ಭಗವಂತ ಖುಬಾ ಬೇಸರ ಹೊರಹಾಕಿದ್ದಾರೆ.

ಕಳೆದ ಒಂದು ವಾರದಿಂದ ಜನರು ಪಡಿತರಕ್ಕಾಗಿ ಹರಸಾಹಸ ಪಡುತ್ತಿದ್ದಾರೆ ಆದರೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ, ಈ ರಾಜ್ಯ ಸರ್ಕಾರದ ಆಡಳತ ಸತ್ತುಹೊಗಿದೆ, ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂತು, ಆದರೆ ಬಂದ ಮೇಲೆ ಉಲ್ಟಾ ಹೊಡೆಯಿತು, ಇಷ್ಟಾದರೂ ಕೇಂದ್ರ ಸರ್ಕಾರ ನೀಡುವ ಅಕ್ಕಿಯೂ ಸಹ ಜನರಿಗೆ ಸರಿಯಾಗಿ ಸಿಗುವ ಹಾಗೆ ವ್ಯವಸ್ಥೆ ಮಾಡದೆ ಇರುವ ರಾಜ್ಯ ಸರ್ಕಾರಕ್ಕೆ ಬಡವರ ಶಾಪ ತಟ್ಟುತ್ತದೆ, ಈ ಸರ್ಕಾರಕ್ಕೆ ಉಳಿಗಾಲವಿಲ್ಲಾ, ಇಂತಹ ಆಡಳಿತ ಮುಂದುವರೆದರೆ ರಾಜ್ಯದಲ್ಲಿ ಜನರು ದಂಗೆ ಏಳುತ್ತಾರೆ ಎಂದು ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.