
ಬಾದಾಮಿ,ಮೇ.೨೯: ಕೇಂದ್ರ ಸರ್ಕಾರದ ಹೃದಯ ಯೋಜನೆ ಅಡಿಯಲ್ಲಿ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಮತ್ತು ಜಗಜ್ಯೋತಿ ಬಸವಣ್ಣನವರ ಮೂರ್ತಿ ಪ್ರತಿ?Á್ಠಪನೆ ಮಾಡಲು ಸ್ಥಳ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕದಂಬ ಸೈನ್ಯದ ವತಿಯಿಂದ ತಹಶೀಲದಾರ ಎಸ್.ಬಿ.ಬೊಮ್ಮನ್ನವರ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರವು ಪಾರಂಪರಿಕ ನಗರ ಚಾಲುಕ್ಯ ರಾಜಧಾನಿ ಬಾದಾಮಿ ನಗರದಲ್ಲಿ ಕೇಂದ್ರ ಹೃದಯ ಯೋಜನೆ ಅಡಿಯಲ್ಲಿ ರೂ.೩ ಕೋಟಿ ರೂ. ವೆಚ್ಚದಲ್ಲಿ ಎರಡು ಇಮ್ಮಡಿ ಪುಲಿಕೇಶಿ ಮೂರ್ತಿ, ಜಗಜ್ಯೋತಿ ಬಸವಣ್ಣನವರ ಮೂರ್ತಿ ಸ್ಟೇ?Àನ್ ರಸ್ತೆ ಬಸವೇಶ್ವರ ವೃತ್ತದಲ್ಲಿ ಪ್ರತಿ?Á್ಠಪನೆ ಮಾಡಲು ಮೂರ್ತಿಗಳು ಸಿದ್ದವಾಗಿದ್ದು, ಕಳೆದ ಮೂರು ವ?Àðಗಳಿಂದ ಬಾದಾಮಿ ರಾಮದುರ್ಗ ರಸ್ತೆಯಲ್ಲಿ ಅನಾಥವಾಗಿವೆ ಮೂರ್ತಿ ಗಳಿಗೆ ಯಾವುದೇ ರಕ್ಷಣೆ ಇಲ್ಲದೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಮೂರ್ತಿಗಳನ್ನು ರಕ್ಷಣೆ ಮಾಡದೆ, ಬಯಲಿನಲ್ಲಿ ಮಳೆ ,ಬಿಸಿಲಿಗೆ ಸಿಲುಕಿ ಮೂರ್ತಿ ಗಳು ಹಾಳಾಗುತ್ತಿವೆ, ಮೂರ್ತಿಗಳ ಪಕ್ಕದಲ್ಲಿ ಸಿಮೇಂಟ್ ಕಲ್ಲು ತಯಾರಿಕೆ ಘಟಕ ದಿಂದ ಸಿಮೇಂಟ್ ಕಲ್ಲು ಪುಡಿ ಧೂಳಿನಿಂದ ಹಾಳಾಗುತ್ತಿದೆ.
ಬಾದಾಮಿ ಪುರಸಭೆಯವರು ಸ್ಥಳ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಜಗಜ್ಯೋತಿ ಬಸವಣ್ಣನವರ ಮೂರ್ತಿಗಳು ಪ್ರತಿ?Á್ಠಪನೆ ಆಗದೆ ಇರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಘನಘೋರ ಅವಮಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ, ಜಿಲ್ಲಾಧ್ಯಕ್ಷ ಶಿವು ನಿಂಗಪ್ಪ ಇಸರಡ್ಡಿ, ರಾಜ್ಯ ಸಮಿತಿ ಸದಸ್ಯರಾದ ಬಸವನಗೌಡ ಪಾಟೀಲ್ ಮುಧೋಳ, ರವಿ ಹೊಸೂರ್, ಅಪ್ಪಣ್ಣ ಬಶೆಟ್ಟೆಪ್ಪ ನೂರಂದಪ್ಪ ಬನಶಂಕರಿ, ವಿಜಯಪುರ ಜಿಲ್ಲೆ ಅಧ್ಯಕ್ಷ ಈರಯ್ಯ ಶಾಂತಯ್ಯ ಆನಂದ ಸಂಗಪ್ಪ ಕಾಳಗಿ ವಿಜಯಪುರ, ಬಾದಾಮಿ ತಾಲ್ಲೂಕು ಮುಖಂಡರಾದ ಮಹಾಂತೇಶ್ ಈರಯ್ಯ ಕಳೀಮಠ, ಪ್ರಕಾಶ್ ಹನುಮಂತ ನಾಲ್ವಡಿ, ಮಹೇಶ್ ಯಲಿಯೂರು ಮಂಡ್ಯ ಜಿಲ್ಲೆ ಬಾಗಲಕೋಟೆ ತಾಲೂಕು ಅಧ್ಯಕ್ಷ ಕೈಲಾಶ್ ರಾ, ಹಂದ್ರಾಳ, ಮುಖಂಡರಾದ ಸಂಗಮೇಶ ಚೌದ್ರಿ, ಹಾಗೂ ಪ್ರಮುಖರು ಭಾಗವಹಿಸಿದ್ದರು.























