Home ಜಿಲ್ಲೆ ಕಲಬುರಗಿ ಪ್ರಿಯಾಂಕ್‌ಗೆ ಡಿಸಿಎಂ, ಡಾ.ಅಜಯಸಿಂಗ್‌ಗೆ ಸಚಿವ ಸ್ಥಾನ ನೀಡಲು ಮನವಿ

ಪ್ರಿಯಾಂಕ್‌ಗೆ ಡಿಸಿಎಂ, ಡಾ.ಅಜಯಸಿಂಗ್‌ಗೆ ಸಚಿವ ಸ್ಥಾನ ನೀಡಲು ಮನವಿ

ಕಲಬುರಗಿ, ಮೇ.೨೯- ರಾಜ್ಯ ನೂತನ ಸಚಿವ ಸಂಪುಟ ರಚನೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆಯನ್ನು ಹಾಗೂ ಜೇವರ್ಗಿ ಶಾಸಕರಾದ ಡಾ.ಅಜಯಸಿಂಗ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಪ್ರಮುಖರ ನಿಯೋಗ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದೆ.
ಕಲ್ಯಾಣ ಕರ್ನಾಟಕದ ಜನಪ್ರೀಯ ನಾಯಕರಾಗಿರುವ ಪ್ರಿಯಾಂಕ್ ಖರ್ಗೆ ಮತ್ತು ಡಾ.ಅಜಯ ಧರಂಸಿAಗ್ ಅವರು, ಹ್ಯಾಟ್ರಿಕ್ ಶಾಸಕಾರಗಿ ಈ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಪ್ರಬುದ್ಧ ಯುವ ರಾಜಕಾರಣಿ ಆಗಿರುವ ಈ ಇಬ್ಬರು ನಾಯಕರಿಗೆ ರಾಜ್ಯದ ನೂತನ ಸಚಿವ ಸಂಪುಟ ರಚನೆಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಹಾಗೂ ಡಾ.ಅಜಯಸಿಂಗ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ, ಹಿರಿಯ ನ್ಯಾಯವಾದಿ ಗುರುರಾಜ ತಿಳಗೊಳ, ಜೇವರ್ಗಿ ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿ ಸದಸ್ಯರಾದ ಮಹಾದೇವ ನಿಲಕೂಡ, ಚಂದ್ರಹಾಸ ಚಿದ್ರಿ, ಅಮೃತ ಸಿ.ಪಾಟೀಲ್ ಸಿರನೂರ, ರವಿ ಒಂಟಿ, ಖಾಜಾ ಮೈನೂದ್ದೀನ, ವೆಂಕಟೇಶ ಕಾಂಬಳೆ, ಸುಭಾಸ ಡಬ್ರಿ ಅವರು, ಪಕ್ಷದ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಈ ಇಬ್ಬರು ಪ್ರಭಾವಿ ಯುವ ನಾಯಕುರಿಗೆ ಸೂಕ್ತ ಸ್ಥಾನ ಮಾನ ನೀಡುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದಂತಾಗುತ್ತದೆ ಅಲ್ಲದೇ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಸಮಾಜಿಕ ನ್ಯಾಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಪಕ್ಷದ ವರಿಷ್ಠರು ಮಾಡಿದಂತಾಗುತ್ತದೆ ಎಂದು ತಮ್ಮ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.