
ಬೀದರ,ಮೇ 20: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ,ಬೀದರ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬೀದರ ಕಲಬುರಗಿ ಮತ್ತು ಯಾದಗಿರ ಜಿಲ್ಲೆಯ ಸಹಕಾರ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಶಿಬಿರವನ್ನು ಬೀದರ ಮನ್ನಾಏಖೆಳಿ ರಸ್ತೆ ವಿಂಟೇಜ ರಿಟ್ರಿಟ್ ರೆಸಾರ್ಟ ಕಾಡವಾದ ಹತ್ತಿರ ಚಟನಳಿದಲ್ಲಿ ಜರಗಿಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ ಅಧ್ಯಕ್ಷ ಅಮರಕುಮಾರ ಬಿ. ಖಂಡ್ರೆ ಅವರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳ ಅಧ್ಯಕ್ಷರಾದ ಶಕುಂತಲಾ ಕಾಶಿನಾಥ ಬೆಲ್ದಾಳೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಭಿಶೇಕ ಆರ್ ಪಾಟೀಲ, ಅವರು ಮಾತನಾಡುತ್ತಾ ಸಹಕಾರ ಸಂಘಗಳಲ್ಲಿ ಬದಲಾವಣೆಯಾದ ಕಾಯಿದೆ ಅಂಶಗಳ ಬಗ್ಗೆ ಕೂಲಂಕುಷವಾಗಿ ಈ ತರಬೇತಿಯಲ್ಲಿ ತಿಳಿಸುತ್ತಾರೆ. ತರಬೇತಿಯಲ್ಲಿ ಅರ್ಥವಾಗದೆ ಇರುವಂತಹ ವಿಷಗಳನ್ನು ಉಪನ್ಯಾಸದ ಸಮಯದಲ್ಲಿ ಉಪನ್ಯಾಸಕರೊಂದಿಗೆ ಚರ್ಚಿಸಿ ಹೆಚ್ಚಿನ ಮಾಹಿತಿ ಪಡೆಯಿರಿ. ಮಾಹಿತಿಗಳನ್ನು ಪಡೆದು ಪಾರದರ್ಶಕವಾಗಿ ಕೆಲಸ ನಿರ್ವಹಿಸಿಕೊಂಡು ಹೋಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳಾದ ವೀರೇಶ ತೂಗಾಂವ, ಶ್ರೀ ದಯಾನಂದ ಜಿ. ಪವನ ವಿಶ್ವಂಬರರಾವ, ಮಲ್ಲಿಕಾರ್ಜುನ ಪಾಂಚಳ ಕಿರಾಣಕುಮಾರ ಕಾಮಶೇಟ್ಟಿ ಕಿರಾಣಕುಮಾರ ಪಾಟೇಲ್ ಐ. ಎಸ್. ಗಿರಡ್ಡಿ, ಡಾ. ಗುರುಸ್ವಾಮಿ.ಶಶಿಶೇಖರ ರೆಡ್ಡಿ, ಮಂಜುಳಾ ಎಸ್, ಡಾ.ನೀಲಾಂಬಿಕಾ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಯೂನಿಯನ್ನಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಸುಬ್ರಮಣ್ಯ ಪ್ರಭು (ನಿರ್ದೇಶಕರು, ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ,) ನಡೆಸಿಕೊಟ್ಟರೆ, ವಿಶ್ವನಾಥ ಮಲಕೂಡ (ಸಹಕಾರ ಸಂಘಗಳ ಜಂಟಿ ನಿಬಂಧಕರು ಕಲಬುರಗಿ ಪ್ರಾಂತ) ವಂದನಾರ್ಪಣೆ ಮಾಡಿದರು.





















