
ಕಲಬುರಗಿ: ಆನ್‍ಲೈನ್ ಮೂಲಕ ಔಷಧಿ ವಹಿವಾಟು ನಿಷೇಧಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಆರ್ಗನೈಜೆಷನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗಿಸ್ಟ್ಸ್ ಇಂದು ದೇಶಾದ್ಯಂತ ಔಷಧಿ ಅಂಗಡಿ ಬಂದ್ ಕರೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಅಂಗಡಿ ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.ರವೀಂದ್ರ ಜೋಶಿ,ವಿಜಯಕುಮಾರ ಹವಾಲ್ದಾರ,ಮಹೇಶ ನಾಡಗೌಡ,ಅವಿನಾಶ,ವಿಶ್ವನಾಥ ಕೋರವಾರ,ನಾಗಭೂಷಣ,ಮೊಹಸೀನ್ ಸೇರಿದಂತೆ ಹಲವರು ಪಾಲ್ಗೊಂಡರು.





















