Home ಜಿಲ್ಲೆ ಕಲಬುರಗಿ ಮೇ 22 ರಿಂದ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿತಾಂತ್ರಿಕ,ಸಾಂಸ್ಕøತಿಕ ಉತ್ಸವ-ನಿರ್ಮಾಣ 2026

ಮೇ 22 ರಿಂದ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿತಾಂತ್ರಿಕ,ಸಾಂಸ್ಕøತಿಕ ಉತ್ಸವ-ನಿರ್ಮಾಣ 2026

ಕಲಬುರಗಿ,ಮೇ 20: ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ. 22 ಮತ್ತು 23 ರಂದು ಎರಡು ದಿನಗಳ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ಸಾಂಸ್ಕøತಿಕ ಉತ್ಸವ “ನಿರ್ಮಾಣ-2026” ನ್ನು ಆಯೋಜಿಸಲಾಗಿದೆ ಎಂದು ಹೈ.ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
22 ರಂದು ಬೆಳಿಗ್ಗೆ 10 ಗಂಟೆಗೆ, ಮಹಾವಿದ್ಯಾಲಯದ “ಪಿಡಿಎ ಆಡಿಟೋರಿಯಂ”, ವಿದ್ಯಾರ್ಥಿ ಚಟುವಟಿಕೆ ಕೇಂದ್ರದಲ್ಲಿ ಉದ್ಘಾಟನೆ ನೆರವೇರಿಸಲಾಗುವುದು. ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ವಿವಿಧ ತಾಂತ್ರಿಕ ಮತ್ತು ಸಾಂಸ್ಕøತಿಕ ಕೌಶಲ್ಯಗಳನ್ನು ಪ್ರದರ್ಶಿಸುವರು.
ಉತ್ಸವದ ಉದ್ಘಾಟಕರಾಗಿ ಉಪ ಪೊಲೀಸ ಆಯುಕ್ತರಾದ ಶಾಲೂ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ ಸದಸ್ಯ ಶಶೀಲ ಜಿ. ನಮೋಶಿ ಅವರು ವಹಿಸುವರು. ಗೌರವ ಅತಿಥಿಗಳಾಗಿ ಬೆಂಗಳೂರು ಮೂಲದ ಇನಫಿನಾನ್ ಟೆಕ್ನಾಲಜಿಯ ಹಿರಿಯ ಪ್ರಮುಖ ಇಂಜಿನಿಯರ ಹಾಗೂ ಹಿರಿಯ ನಿರ್ದೇಶಕ ಮತ್ತು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ. ಪ್ರಕಾಶ ಬಾಲಸುಬ್ರಮಣಿಯನ್, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ ಪಾಟೀಲ, ಮಹಾವಿದ್ಯಾಲದ ಆಡಳಿತ ಮಂಡಳಿಯ ಸದಸ್ಯರಾದ ಅರುಣಕುಮಾರ ಎಮ್. ಪಾಟೀಲ, ಡಾ. ಶರಣಬಸಪ್ಪ ಆರ್. ಹರವಾಳ, ಡಾ. ಅನೀಲಕುಮಾರ ಬಿ. ಪಟ್ಟಣ, ಡಾ. ರಜನೀಶ ವಾಲಿ, ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರುವರು.
ಎರಡು ದಿನಗಳ ತಾಂತ್ರಿಕ ಮತ್ತು ಸಾಂಸ್ಕøತಿಕ ಉತ್ಸವದಲ್ಲಿ ಟೆಕ್ನೋವಿಷನ ಅಡಿಯಲ್ಲಿ ವಿವಿಧ ತಾಂತ್ರಿಕಸ್ಪರ್ಧೆಗಳಾದ 12 12 ಗಂಟೆಗಳ ಕಾಲದ ಕೋಡ್ ಎಕ್ಸರೇಟ್, ಸ್ಪೀಕ್ ಟ್ಯಾಕೂಲಾರ, ಸ್ಲೈಡ್ ಎನ್ ಸರವೈವ್, ಟೆಕ್ ಆಕ್ಸನ್ ವಾರ್ಸ್, ಏರ್ಪಡಿಸಿದ್ದು ಇದರಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ತಾಂತ್ರಿಕ ಮಹವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುವರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ಅದೇ ದಿನ ಸಾಯಂಕಾಲ 7 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ತಾಂತ್ರಿಕ ಮತ್ತು ಸಾಂಸ್ಕøತಿಕ ಸಮ್ಮಿಲನದ ಹಬ್ಬವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕುವ ವೇದಿಕೆಯಾಗಿ ಪರಿಣಮಿಸುವುದು.
ಈ ಉತ್ಸವದಲ್ಲಿ ವಿದ್ಯಾರ್ಥಿಗಳ ತಾಂತ್ರಿಕ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕಗಳು ನಡೆಯಲ್ಲಿದ್ದು, ಈ ಭಾಗದ ವಿವಿಧ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವರು. ಈ ಉತ್ಸವದಲ್ಲಿ ನೃತ್ಯ, ಗಾಯನ, ವಾಲಿಬಾಲ, ಫುಟಬಾಲ್, ಗಲ್ಲಿ ಕ್ರಿಕೇಟ, ಹಾಗೂ ಮುಂತಾದವುಗಳು ಜರುಗುವುವು.
22 ರಂದು ಬೆಳಿಗ್ಗೆ 6ಗಂಟೆಗೆ ನಿರ್ಮಾಣ ಉತ್ಸವದ ಅಂಗವಾಗಿ ಮ್ಯಾರಾಥಾನ ಹಮ್ಮಿಕೊಳ್ಳಲಾಗಿದೆ.ಈ ಮ್ಯಾರಾಥಾನ ವಿಕಾಸ ಸೌಧದಿಂದ ಪ್ರಾರಂಭಗೊಂಡು ಸರದಾರ ವಲ್ಲಭಾಯಿ ವೃತ್ತದ ಮುಖಾಂತರ ಪಿ.ಡಿ.ಎ. ಕಾಲೇಜು ತಲುಪುವುದು.
ಉತ್ಸವ ನಿರ್ವಹಣೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಆರ್. ಪಾಟೀಲ ಮತ್ತು ಉಪಪ್ರಾಚಾರ್ಯರುಗಳಾದ ಡಾ. ಎಸ್. ಆರ್. ಹೊಟ್ಟಿ ಮತ್ತು ಡಾ. ಭಾರತಿ ಹರಸೂರು ಅವರು ನಿರ್ವಹಿಸುವರು. ಉತ್ಸವದ ಸಂಯೋಜಕರಾಗಿ ಪ್ರೊ. ಜಯಪ್ರಕಾಶ ಎ. ಕೆ. ಅವರು ವಹಿಸುವರು. ಸಂಚಾಲಕರಾಗಿ ಪ್ರೊ. ಶಿವರಾಜ ಕೆ. ಇಂಗನಕಲ್, ಪ್ರೊ. ಮಲ್ಲಿಕಾರ್ಜುನ ಬಿಜಾಪೂರ, ಡಾ. ಸುಜಾತಾ ಡಿ. ಪಾಟೀಲ, ಡಾ. ಸೌಮ್ಯ ಪೆದ್ದಿ, ಪ್ರೊ. ಅಕ್ಷಯ ಆಸ್ಪಳ್ಳಿ ಹಾಗೂ ಪ್ರೊ. ಅಶ್ವಿನಿ ಹತ್ತಿ ಅವರು ವಹಿಸಿಕೊಳ್ಳುವರು.ಟೆಕ್ನೋವಿಷನ್ ಸಂಚಾಲಕರಾಗಿ ಡಾ. ಪವನ ರಂಗದಾಳ ಹಾಗೂ ಡಾ. ರಾಕೇಶ ಹುಡೆದ ಅವರು ತಮ್ಮ ಕಾರ್ಯವನ್ನು ನಿರ್ವಹಿಸುವರು. ವಿದ್ಯಾರ್ಥಿ ಸಂಚಾಲಕರಾಗಿ ತಿಪ್ಪಣ್ಣ ನಾಟೀಕಾರ್ ಮತ್ತು ಪ್ರೀತ ಮೇಹತಾ ಅವರನ್ನು ನೇಮಿಸಿಲಾಗಿದೆ ಎಂದು ವಿವರಿಸಿದರು.