
ಔರಾದ್ : ಮೇ.20:ಮಂಗಳವಾರ ಸುರಿದ ಮಳೆ ಹಾಗೂ ಬಿರುಗಾಳಿಗೆ ಮನೆ ಮೇಲಿನ ಪತ್ರಾಸ ಸೇರಿದಂತೆ ಮರ ಉರುಳಿ ಒಂದು ಎತ್ತು ಮೃತಪಟ್ಟ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲೂಕಿನ ಠಾಣಾ ಕುಶನೂರ ಗ್ರಾಮದ ಹುಸೇನಸಾಬ್ ತಂ ಚಾಂದಸಾಬ ಅವರ ಎತ್ತು ಭಾರಿ ಪ್ರಮಾಣದ ಮರ ಉರುಳಿ ಬಿದ್ದ ಪರಿಣಾಮ ಮೃತಪಟ್ಟಿದೆ. ಮತ್ತೊಂದೆಡೆ ಕೌಠಾ ಗ್ರಾಮದ ವೈಜಿನಾಥ ಶಂಕ್ರಪ್ಪ ಅವರ ಮನೆ ಮೇಲ್ಛಾವಣಿ ತಗಡುಗಳು ಭಾರಿ ಮಳೆಗೆ ಹಾರಿ ಮನೆಯಲ್ಲಿ ನೀರು ತುಂಬಿಕೊಂಡಿದೆ, ಕರಕ್ಯಾಳ ಗ್ರಾಮದ ಸರುಬಾಯಿ ದೇವಿದಾಸ ಅವರ ಮನೆ ಮಳೆ ಸಹಿತ ಗಾಳಿಗೆ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ತಾಲ್ಲೂಕಿನಲ್ಲಿ ಔಖಳಿ ಮಳೆ ಗಾಳಿಗೆ ಜನ ತತ್ತರಿಸಿದೆ. ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





















