
ಸೇಡಂ, ಮೇ,20: ತಾಲೂಕಿನ ನಾಮವಾರ ಗ್ರಾಮದಲ್ಲಿರುವ ಚರಂಡಿಯ ಮೇಲೆ ಕಲ್ಲುಗಳಿಂದ ಮುಚ್ಚಿರುವುದರಿಂದ ಚರಂಡಿ ನೀರು ಹರಿದು ರಸ್ತೆ ಮೇಲೆ ಹರಿದು ಹೋಗುತ್ತಿದ್ದೆ ಗ್ರಾಮಸ್ಥರಿಗೆ ನಿತ್ಯ ತೊಂದರೆಯಾಗುತ್ತಿದೆ ಆದ್ದರಿಂದ ಚರಂಡಿ ನೀರನ್ನು ಸುಗಮವಾಗಿ ಹರಿದು ಹೊಗುವಂತೆ ದುರಸ್ತಿ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದರು. ಈ ವೇಳೆಯಲ್ಲಿ ಕ.ರ.ವೇ. ನಾಮವಾರ ಗ್ರಾಮ ಘಟಕ ಅಧ್ಯಕ್ಷರಾದ ನರಸಪ್ಪ, ಉಪಾಧ್ಯಕ್ಷ ಸಾಗರ್ ಪ್ರಧಾನ ಕಾರ್ಯದರ್ಶಿ ಸಂತೋಷ,ಕರವೇ ಸದಸ್ಯರಾದ ಯಲೇಶ, ಶರಣಯ್ಯ ಸ್ವಾಮಿ, ಅರ್ಜುನ್, ನಾಗೇಶ್, ಮೌನೇಶ್, ವಿಕಾಸ್, ರವಿ, ಇರ್ಫಾನ್ ಸೇರದಂತೆ ಅನೇಕರು ಇದ್ದರು.
ಅರ್ಧ ಗ್ರಾಮಕ್ಕೆ ವಿದ್ಯುತ್ ಬಲ್ಬ್ ಅಳವಡಿಸಿದರೆ ಇನ್ನೂ ಉಳಿದ ಗ್ರಾಮಕ್ಕೆ ವಿದ್ಯುತ್ ಬಲ್ಬ್ ಅಳವಡಿಸಿ ಇರುವುದಿಲ್ಲ, ಆದಷ್ಟು ಬೇಗ ಉಳಿದ ಅರ್ಧ ಗ್ರಾಮಕ್ಕೆ ಬಲ್ಬ್ ಅಳವಡಿಸಬೇಕಿದೆ.
ಸಂತೋಷ್ ಕರವೇ ಪ್ರಧಾನ ಕಾರ್ಯದರ್ಶಿ ನಾಮವಾರ





















