
ಕಲಬುರಗಿ:ಮೇ.20:ಜೇವರ್ಗಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ದಿ. 19-05-2026 ರಂದು ಸಮತೋಲನ ರಸಗೊಬ್ಬರ ಬಳಕೆ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿರುವ ರಾಜೋತ್ಸವ ಪ್ರಶಸ್ತಿ ಪುಸ್ಕøತರಾದ ಶ್ರೀ ಸೋಮನಾಥರೆಡ್ಡಿ ಪೂರ್ಮಾ ಸಾ. ಕೊಡ್ಲಾರವರು ಹಾಗೂ ಅತಿಥಿಗಣ್ಯರು ಸಸಿಗೆ ನೀರು ಹಾಯಿಸುವು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಶ್ರೀಯುತರು ರೈತರನ್ನು ಕುರಿತು ಮಾತನಾಡುತ್ತಾ ಕೃಷಿಯಲ್ಲಿ ಬೆಳೆ ಪರಿವರ್ತನೆ, ಪರ್ಯಾಯ ಬೆಳೆ, ಅಂತರ ಬೆಳೆ ಹಾಗೂ ಬೆಳೆ ಊಳಿಕೆಯನ್ನು ಭೂಮಿಗೆ ಸೇರಿಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಿ ರಸಗೊಬ್ಬರಗಳ ಮೇಲಿನ ಅವಲಂಭನೆ ಕಡಿಮೆಗೊಳಸಿಲು ತಿಳಿಸದರು ಮುಂದುವರೆದು ಕೃಷಿ ಮತ್ತು ಯೋಗ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಹಾಗಾಗಿ ರೈತರು, ಅಧಿಕಾರಿಗಳು ಮತ್ತು ವಿಧ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಕೊಳ್ಳಲು ಸಲಹೆ ನೀಡಿದರು.
ಸದರಿ ಕಾರ್ಯಕ್ರಮದ ಸಹ ಸಂಯೋಜಕರಾದ ಶ್ರೀಮತಿ ಫರ್ಜಾನ ಎಮ.ಕೆ, ಹಿರಿಯ ತಾಂತ್ರಿಕ ಅಧಿಕಾರಿ (ಮಣ್ಣು ವಿಜ್ಞಾನ) ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳ ಬಳಕೆ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ್ತ ಸಂಧರ್ಬದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಮತ್ತು ಡಿಎಪಿ ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಮತ್ತು ಪರಿಸರ ಮೇಲೆ ಪರಿಣಾಮ ಬೀರುವುದಲ್ಲದೇ ಮುಂದಿನ ದಿನಗಳಲ್ಲಿ ವಿಷ ಆಹಾರಯಾಗುವುದು ಖಚಿತ.
ವಿಶೇಷ ಅತಿಥಿ ಉಪನ್ಯಾಸಕರಾಗಿ ಡಾ. ಚಂದ್ರಕಾಂತ, ವಿಜ್ಞಾನಿ (ಮಣ್ಣು ವಿಜ್ಞಾನ) ಕೃಷಿ ವಿಜ್ಞಾನ ಕೇಂದ್ರ, ಬೀದರು ರವರು ರೈತ ಬಾಂಧವರು ಮಣ್ಣಿನ ಆರೂಗ್ಯ ಕಾಪಡಲು ಮತ್ತು ರಸಗೊಬ್ಬರಗಳ ವೆಚ್ಚ ಕಡಿಮೆಗೊಳಸಿಲು ಸಾವಯವ ಗೊಬ್ಬರಗಳಾದ ಜೈವಿಕ ಗೊಬ್ಬರ, ಕಾಂಪೋಸ್ಟ, ಎರೆಹುಳು ಗೊಬ್ಬರ ಮತ್ತು ಹಸಿರಲೇ ಗೊಬ್ಬರಗಳು ಎತ್ತೇಚವಾಗಿ ಬಳಸಿ, ಬೇಸಾಯ ವೆಚ್ಚ ಕಡಿಮೆಗೊಳಸಿ ಆರ್ಥಿಕ ಲಾಭ ಪಡೆಯಲು ಕೋರಿದರು.
ಕೇಂದ್ರದ ಮುಖ್ಯಸ್ಥರಾದ ಡಾ. ಪಿ. ವಾಸುದೇವ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಉತ್ತಮ ಗುಣ್ಣಮಟ್ಟದ ಬೀಜಗಳಾದ ತೋಗರಿ ತಳಿ ಜಿ.ಆರ.ಜಿ-152 ಮತ್ತು ಜಿ.ಆರ.ಜಿ-811 ಬೀಜ ಇದೇ ತಿಂಗಳು 25ಕ್ಕೆ ನಮ್ಮಲ್ಲಿ ಲಭ್ಯವಿದ್ದು ಸುತ್ತಮುತ್ತಲಿನ ರೈತ ಬಾಂಧವರು ಬಂದು ಖರೀದಿಸಲು ತಿಳಿಸಿದರು ಹಾಗೂ ಈ ವರ್ಷ ವಾಡಿಕೆಯಂತೆ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು ರೈತರು ಬಿತ್ತುವ ಪೂರ್ವದಲ್ಲಿ ಜೈವಿಕ ಗೊಬ್ಬರಗಳಿಂದ ಬೋಜೊಪಚಾರ ಮಾಡಿ ಬಿತ್ತಲು ಸಲಹೆ ನೀಡಿದರು. ಮುಂಬರುವ ಹಂಗಾಮಿನ ವಿವಿಧ ಬೆಳೆಗಳಿಗೆ ಬೇಕಾಗುವ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನಿಡಿ ವಿಜ್ಞಾನಿಗಳಿಂದ ಸಲಹೆ ಪಡೆಯಲು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ತಾಂತ್ರಿಕ ಸಿಬ್ಬಂದಿ ಮತ್ತು ಕಾರ್ಮಿಕರು ಹಾಗೂ ರೈತರನ್ನು ಸೇರಿ 50ಕ್ಕೂ ಹೆಚ್ಚು ಜನ ಭಾಗವಹಿಸಿ ಕಾರ್ಯಕ್ರಮದ ಲಾಭಪಡೆದರು. ಕಾರ್ಯಕ್ರಮದ ಸ್ವಾಗತ ಮುತ್ತು ನೀರೂಪಣೆಯನ್ನು ಶ್ರೀ. ಎಮ್.ಸಿ. ಪಾಟೀಲ, ಹಿರಿಯ ತಾಂತ್ರಿಕ ಅಧಿಕಾರಿ (ಕ್ಷೇತ್ರ ನಿರ್ವಹಣೆ) ನಡೆಸಿದರು ಕೊನೆಯಲ್ಲಿ ವಂದಾರ್ಪಣೆಯನ್ನು ಶ್ರೀ. ಸಂಜೀವಕುಮಾರ ಪಾಟೀಲ, ಹಿರಿಯ ತಾಂತ್ರಿಕ ಅಧಿಕಾರಿ (ಗಣಕಯಂತ್ರ) ರವರು ನೇರವೇರಿಸಿದರು.




















