
ಗ್ರಾಹಕರ ಕಿಸೆಗೆ ಕತ್ತರಿ
ನವದೆಹಲಿ, ಮೇ.೧೯- ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ಮತ್ತೆ ಸುಮಾರು ೯೦ ಪೈಸೆ ಹೆಚ್ಚಿಸಲಾಗಿದ್ದು, ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ಇಂಧನ ಬೆಲೆ ಏರಿಕೆ ಮಾಡಲಾಗಿದೆ, ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ
ಇತ್ತೀಚಿನ ಏರಿಕೆಯ ನಂತರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ೯೮.೬೪ ರೂ.ಗೆ ಏರಿಕೆಯಾಗಿದೆ. ಈ ಹಿಂದಿನ ೯೭.೭೭ ರೂ.ನಿಂದ ೯೭.೬೪ ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್ ಗೆ ೯೦.೬೭ ರೂ.ನಿಂದ ೯೧.೫೮ ರೂ.ಗೆ ಹೆಚ್ಚಳವಾಗಲಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಹೊರ್ಮುಜ್ ಜಲಸಂಧಿಯ ಸುತ್ತಲಿನ ಅಡಚಣೆಗಳಿಗೆ ಸಂಬಂಧಿಸಿದ ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯ ಮಧ್ಯೆ ಇಂಧನ ಬೆಲೆಗಳನ್ನು ಲೀಟರ್‍ಗೆ ೩ ರೂ. ಹೆಚ್ಚಿಸಿದ ಕೆಲವು ದಿನಗಳ ನಂತರ ಮತ್ತೆ ಪ್ರತಿ ಲೀಟರ್ ಗೆ ೯೦ ಪೈಸೆ ಹೆಚ್ಚಾಗಿದೆ
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ೮೭ ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ೯೧ ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ೯೧ ಪೈಸೆ ಏರಿಕೆಯಾಗಿ ೧೦೭.೫೯ ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ೯೪ ಪೈಸೆ ಏರಿಕೆಯಾಗಿ ೯೪.೦೮ ರೂ.ಗೆ ತಲುಪಿದೆ.
ನಾಲ್ಕು ಮಹಾನಗರಗಳಲ್ಲಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ ೯೬ ಪೈಸೆ ಏರಿಕೆಯಾಗಿ ೧೦೯.೭೦ ರೂ.ಗೆ ತಲುಪಿದೆ. ಡೀಸೆಲ್ ಬೆಲೆಯಲ್ಲಿ ೯೪ ಪೈಸೆ ಏರಿಕೆಯಾಗಿ ೯೬.೦೭ ರೂ.ಗೆ ತಲುಪಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ೮೨ ಪೈಸೆ ಏರಿಕೆಯಾಗಿ ಲೀಟರ್ ಗೆ ೧೦೪.೪೯ ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ ೮೬ ಪೈಸೆ ಏರಿಕೆಯಾಗಿ ಲೀಟರ್ ಗೆ ೯೬.೧೧ ರೂ.ಗೆ ತಲುಪಿದೆ.
ಲೋಕಸಭಾ ಚುನಾವಣೆಗೆ ಮುನ್ನ ಮಾರ್ಚ್ ೨೦೨೪ ರಲ್ಲಿ ಲೀಟರ್ ೨ ರೂ. ಕಡಿತ ಹೊರತುಪಡಿಸಿ, ಏಪ್ರಿಲ್ ೨೦೨೨ ರಿಂದ ಚಿಲ್ಲರೆ ಇಂಧನ ಬೆಲೆಗಳು ಹೆಚ್ಚಾಗಿ ಬದಲಾಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿತ್ತು. ಇದೀಗ ವಾರದ ಅಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ೩ ರೂಪಾಯಿ ೯೦ ಪೈಸೆ ಹೆಚ್ಚಳ ಮಾಡಲಾಗಿದೆ
ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಜಾಗತಿಕ ಕಚ್ಚಾ ತೈಲ ಬೆಲೆ ಆಘಾತಗಳಿಂದ ಗ್ರಾಹಕರನ್ನು ರಕ್ಷಿಸಲು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾಪೆರ್ರೇಷನ್, ಭಾರತ್ ಪೆಟ್ರೋಲಿಯಂ ಕಾಪೆರ್ರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೆರ್ರೇಷನ್ ಲಿಮಿಟೆಡ್ ೨೦೨೨ ರಲ್ಲಿ ದೈನಂದಿನ ಇಂಧನ ಬೆಲೆ ಪರಿಷ್ಕರಣೆ ಮಾಡಲಾಗಿದೆ
ಫೆಬ್ರವರಿಯಲ್ಲಿ ಭಾರತದ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸರಾಸರಿ ೬೯ ಡಾಲರ್‌ರಷ್ಟಿತ್ತು, ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅದು ತೀವ್ರವಾಗಿ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ೧೧೩ ರಿಂದ ೧೧೪ ಡಾಲರ್ ಗೆ ತಲುಪಿದೆ
ಭಾರತ ತನ್ನ ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಸುಮಾರು ೯೦ ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ, ಇದರಿಂದಾಗಿ ದೇಶೀಯ ಇಂಧನ ಬೆಲೆ ನಿಗದಿಯು ಹೆಚ್ಚು ಸೂಕ್ಷ್ಮವಾಗಿರುತ್ತದೆ
ಜಾಗತಿಕ ಇಂಧನ ವ್ಯಾಪಾರ ಮಾರ್ಗಗಳಲ್ಲಿ ಅಡಚಣೆಗಳಿದ್ದರೂ ಇಂಧನ ಕೊರತೆ ಅಥವಾ ಪಡಿತರ ಯೋಜನೆಯಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ.
























