
ಬೆಂಗಳೂರು. ಮೇ. ೧೯- ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಇಂದು ಮಧ್ಯರಾತ್ರಿ ೧೨ ಗಂಟೆಯಿಂದ ಕರ್ನಾಟಕದಾದ್ಯಂತ ಸಾವಿರಾರು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ. ದೇಶವ್ಯಾಪಿ ಕರೆ ನೀಡಿರುವ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಹೋರಾಟಕ್ಕೆ ಕರ್ನಾಟಕದ ಔಷಧ ವ್ಯಾಪಾರಿಗಳ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ.
ಸಂಘಟನೆಗಳ ಪ್ರಕಾರ, ರಾಜ್ಯದಲ್ಲಿ ಸುಮಾರು ೨೬ ಸಾವಿರಕ್ಕೂ ಅಧಿಕ ಮೆಡಿಕಲ್ ಅಂಗಡಿಗಳು ಹಾಗೂ ಬೆಂಗಳೂರಿನಲ್ಲಿ ಸುಮಾರು ೬,೫೦೦ಕ್ಕೂ ಹೆಚ್ಚು ಮೆಡಿಕಲ್‌ಗಳು ನಾಳೆ ಬಂದ್ ಆಗಲಿವೆ. ದೇಶಾದ್ಯಂತ ಸುಮಾರು ೧೨ ಲಕ್ಷ ಮೆಡಿಕಲ್ ಶಾಪ್‌ಗಳು ಈ ಹೋರಾಟದಲ್ಲಿ ಭಾಗಿಯಾಗಲಿವೆ ಎಂದು ಹೇಳಲಾಗಿದೆ.
ಹೋರಾಟದ ಮೂಲ ಕಾರಣ ಏನು?
ಆನ್‌ಲೈನ್ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆ ಸಾಂಪ್ರದಾಯಿಕ ಮೆಡಿಕಲ್ ಅಂಗಡಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ವಿಶೇಷವಾಗಿ ಃಟiಟಿಞiಣ, Sತಿiggಥಿ ಹಾಗೂ Zomಚಿಣo ಮೊದಲಾದ ಆಪ್‌ಗಳ ಮೂಲಕ ಔಷಧಿ ವಿತರಣೆ ಹೆಚ್ಚುತ್ತಿರುವುದನ್ನು ಸಂಘಟನೆಗಳು ವಿರೋಧಿಸುತ್ತಿವೆ.
ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿಗಳು ಮಾರಾಟವಾಗುತ್ತಿರುವುದು, ನಕಲಿ ಔಷಧಿಗಳ ಭೀತಿ, ಆಂಟಿಬಯೋಟಿಕ್ ದುರುಪಯೋಗ ಹಾಗೂ ನಿಯಂತ್ರಣರಹಿತ ಇ-ಫಾರ್ಮಸಿ ವ್ಯವಸ್ಥೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳು ಮುಂದಿಟ್ಟಿರುವ ಪ್ರಮುಖ ಆತಂಕಗಳು:
ನಿಯಂತ್ರಣವಿಲ್ಲದ ಆನ್‌ಲೈನ್ ಔಷಧ ಮಾರಾಟ
ನಕಲಿ ಪ್ರಿಸ್ಕ್ರಿಪ್ಷನ್ ಬಳಕೆ
ಆಂಟಿಬಯೋಟಿಕ್ ಹಾಗೂ ಚಟ ಉಂಟುಮಾಡುವ ಔಷಧಿಗಳ ದುರುಪಯೋಗ
ರೋಗಿ ಮತ್ತು ಫಾರ್ಮಸಿಸ್ಟ್ ನಡುವಿನ ನೇರ ಸಂಪರ್ಕದ ಕೊರತೆ
ಸರಿಯಾದ ಸಂಗ್ರಹಣೆ ಇಲ್ಲದ ಔಷಧಿಗಳ ಅಪಾಯ
ಭಾರೀ ಡಿಸ್ಕೌಂಟ್ ಮೂಲಕ ಸಣ್ಣ ವ್ಯಾಪಾರಿಗಳಿಗೆ ಹೊಡೆತ
ಮಾರುಕಟ್ಟೆಯಲ್ಲಿ ಏಕಾಧಿಪತ್ಯ ಸೃಷ್ಟಿಯಾಗುವ ಭೀತಿ.
























