Home ಜಿಲ್ಲೆ ೨೦ ರಂದು ತಾಳಿಕೋಟೆಯಲ್ಲಿಔಷಧ ಅಂಗಡಿಗಳ ಸಂಪೂರ್ಣ ಬಂದ್‌ಗೆ ನಿರ್ಧಾರ

೨೦ ರಂದು ತಾಳಿಕೋಟೆಯಲ್ಲಿಔಷಧ ಅಂಗಡಿಗಳ ಸಂಪೂರ್ಣ ಬಂದ್‌ಗೆ ನಿರ್ಧಾರ

ತಾಳಿಕೋಟೆ : ಮೇ.೧೯:ಔಷಧಗಳನ್ನು ಆನ್‌ಲೈನ್ ಸೇವೆಯ ಮೂಲಕ ವಿತರಿಸುವದನ್ನು ಸ್ಥಗಿತಗೊಳಿಸಬೇಕೆಂದು ಅಖೀಲ ಭಾರತ ಔಷಧ ವ್ಯಾಪಾರಸ್ಥರ ಸಂಘ, ಕರ್ನಾಟಕ ರಾಜ್ಯ ಔಷಧ ವ್ಯಾಪಾರಸ್ಥರ ಸಂಘ, ಜಿಲ್ಲಾ ಹಾಗೂ ತಾಳಿಕೋಟೆ ತಾಲೂಕಾ ಘಟಕದ ನೇತೃತ್ವದಲ್ಲಿ ಇದೇ ದಿ.೨೦ ರಂದು ನಗರದಲ್ಲಿರುವ ಎಲ್ಲ ಔಷಧ ಅಂಗಡಿಗಳನ್ನು ಒಂದು ದಿನದ ಸಂಪೂರ್ಣ ಬಂದ್‌ಗೊಳಿಸಲು ನಿರ್ಧರಿಸಿದ್ದಾರೆ.
ತಾಲೂಕಾ ಔಷಧ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಸೋಮವಾರರಂದು ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ವಾಸುದೇವ ಹೆಬಸೂರ ಅವರು ಮಾತನಾಡಿ ದಿ. ೨೦ ಬುಧವಾರರಂದು ಒಂದು ದಿನ ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡುವದು ಆನ್‌ಲೈನ್ ಸೇವೆಯ ನೆಪದಲ್ಲಿ ಔಷಧ ಪೂರೈಸುತ್ತಿರುವ ಕೆಲವು ಕಂಪನಿಗಳು ಗ್ರಾಹಕರಿಗೆ ಸರಿಯಾದ ಮೇಡಿಷನ್ ನೀಡದೇ ವಂಚಿಸುತ್ತಿವೆ ಅಲ್ಲದೇ ಕೆಲವು ಖಾಸಗಿ ದೊಡ್ಡ ದೊಡ್ಡ ಕಂಪನಿಗಳು ಔಷದಗಳಿಗೆ ಹೆಚ್ಚಿನ ರೀಯಾಯಿತಿ ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿವೆ ಈ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಆಗ್ರಹಿಸಿ ಸಂಘದ ಕರೆಯ ಮೇರೆಗೆ ಒಂದು ದಿನ ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ ಎಂದ ಅವರು ದಿ.೨೦ ರಂದು ಔಷಧ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ತಾಳಿಕೋಟೆ ನಗರದ ಕತ್ರಿ ಭಜಾರದಿಂದ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹ್ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಬಸವೇಶ್ವರ ವೃತ್ತಕ್ಕೆ ಮುಕ್ತಾಯಗೊಳಿಸಿ ತಹಶಿಲ್ದಾರರಿಗೆ ಮನವಿ ಸಲ್ಲಿಲಾಗುವದೆಂದರು.
ಈ ಸಮಯದಲ್ಲಿ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಭಾಸ ಸಾಲಂಕಿ, ಉಪಾಧ್ಯಕ್ಷ ಸಂತೋಷ ಪ್ರಥಮಶೆಟ್ಟಿ, ಮೈನುದ್ದೀನ ಕೊರ್ತಿ, ರವಿ ಪಾಟೀಲ, ಲಕ್ಷಿö್ಮÃಕಾಂತ ಸಜ್ಜನ, ಶಿವಲಿಂಗಪ್ಪ ಸಾಲಂಕಿ, ಶಶಿಧರ ಸರಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.