
ಕಲಬುರಗಿ,ಮೇ.15-ಮನೆ ಬೀಗ ಮುರಿದು 3.35 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಉದನೂರ ರಸ್ತೆಯ ಮಾಣಿಕಪ್ರಭು ಕಾಲೋನಿಯಲ್ಲಿ ನಡೆದಿದೆ.
ಪ್ರೀತಿ ಕಿರಣ್ ದೇಸಾಯಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 3 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರದ ಸಿಂಗಾರ, 35 ಸಾವಿರ ರೂ.ನಗದು ಕಳವು ಮಾಡಿದ್ದಾರೆ.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.























