Home ಜಿಲ್ಲೆ ೮೦ನೇ ಸ್ವಾತಂತ್ರö್ಯ ದಿನಾಚರಣೆ

೮೦ನೇ ಸ್ವಾತಂತ್ರö್ಯ ದಿನಾಚರಣೆ


ಲಕ್ಷೆ÷್ಮÃಶ್ವರ,ಆ.೧೬: ಪಟ್ಟಣದಲ್ಲಿ ತಾಲೂಕ ಆಡಳಿತ ವತಿಯಿಂದ ಪುರಸಭೆಯ ಉಮಾ ಮಹಾವಿದ್ಯಾಲಯದ ಮೈದಾನದಲ್ಲಿ ೮೦ನೇ ಸ್ವಾತಂತ್ರ÷್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿAದ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.


ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ ಧನಂಜಯ ಎಂ ಅವರು ಬ್ರಿಟಿಷರ ಹಿಡಿತದಲ್ಲಿದ್ದ ಭಾರತವನ್ನು ಅವರ ಕಪಿಮುಷ್ಟಿಯಿಂದ ಮುಕ್ತ ಮಾಡಲು ಅನೇಕ ಹೋರಾಟಗಳು ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ಜರುಗಿದವು.
ಸ್ವಾತಂತ್ರ÷್ಯ ಹೋರಾಟಕ್ಕಾಗಿ ಅನೇಕ ರಾಷ್ಟçಭಕ್ತರು ದೇಶ ಪ್ರೇಮಿಗಳು ತ್ಯಾಗ ಬಲಿದಾನ ಮಾಡಿದ್ದು ಅದರ ಫಲವಾಗಿ ನಾವಿಂದು ಸ್ವಾತಂತ್ರವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ÷್ಯ ನಂತರ ದೇಶದ ಸಂವಿಧಾನ ರಚನೆಯಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಮ್ಮ ದೇಶಕ್ಕೆ ದಾರಿ ದೀಪವಾಗಿದೆ ಎಂದರು.
ಇದಕ್ಕೂ ಮೊದಲು ಪೊಲೀಸ್ ಹೋಮ್ ಗಾರ್ಡ್ಸ್ ಏನ್ ಸಿ ಸಿ ವಿವಿಧ ಶಾಲಾ ಕಾಲೇಜುಗಳ ಆಕರ್ಷಕ ಪರೇಡ್ ಪಿಎಸ್‌ಐ ನಾಗರಾಜ್ ಗಡಾದವರ ನೇತೃತ್ವದಲ್ಲಿ ಜರಗಿತು ನಂತರ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕöÈತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಗ್ರೇಡ್ ೨ ತಹಸಿಲ್ದಾರ್ ಮಂಜುನಾಥ್ ಅಮಾಸಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ್ ಮಡಿವಾಳರ ಉಪ ತಹಶೀಲ್ದಾರ್ ಪ್ರಶಾಂತ ಕಿಮಾಯಿ ಕಂದಾಯ ನಿರೀಕ್ಷಕ ಬಿ ಎಂ ನದಾಫ್ ಪಿಎಸ್‌ಐ ನಾಗರಾಜ ಗಡಾದ ಬಿ ಆರ್ ಸಿ ಮಂಜುನಾಥ್ ಚಾ?ಕಲಬ್ಬಿ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ ಬಿ ಎಂ ಯರಗುಪ್ಪಿ ಎನ್‌ಎ ಮುಲ್ಲಾ ಸೇರಿದಂತೆ ಅನೇಕರಿದ್ದರು ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.