Home ಜಿಲ್ಲೆ ಶಾಂತಿಯುತವಾಗಿ ಶೇ.೭೫.೬೨ ರಷ್ಟು ಮತದಾನ

ಶಾಂತಿಯುತವಾಗಿ ಶೇ.೭೫.೬೨ ರಷ್ಟು ಮತದಾನ

ಧಾರವಾಡ, ಅ.೨೪: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿ ಒಟ್ಟು ಶೇ. ೭೫.೬೨ ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಮ್.ಜಾನಕಿ ಅವರು ತಿಳಿಸಿದ್ದಾರೆ.


ಬೆಳಿಗ್ಗೆ ೮ ಗಂಟೆಯಿAದ ನಿಗದಿಯಂತೆ ನಾಲ್ಕು ಜಿಲ್ಲೆಯ ೧೩೭ ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭವಾಯಿತು. ಬೆಳಿಗ್ಗೆ ೮ ಗಂಟೆಯಿAದ ೧೨ ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.೨೭.೧೭, ಹಾವೇರಿ ಜಿಲ್ಲೆಯಲ್ಲಿ ಶೇ.೨೮.೩೭, ಗದಗ ಜಿಲ್ಲೆಯಲ್ಲಿ ಶೇ.೨೫.೨೭ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.೨೯.೬೫ ಸೇರಿ ಒಟ್ಟು ಶೇ.೨೭.೪೬ ಮತದಾನವಾಗಿದೆ. ಮಧ್ಯಾಹ್ನ ೦೨ ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.೪೭.೭೧, ಹಾವೇರಿ ಜಿಲ್ಲೆಯಲ್ಲಿ ಶೇ.೫೩.೦೬, ಗದಗ ಜಿಲ್ಲೆಯಲ್ಲಿ ಶೇ.೪೬.೧೮ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.೫೨.೦೯ ಸೇರಿ ಒಟ್ಟು ಶೇ.೪೯.೪೫ ಮತದಾನವಾಗಿದೆ. ಮತ್ತು ಸಂಜೆ ೦೪ ಗಂಟೆಯವರೆಗೆ ಧಾರವಾಡ ಜಿಲ್ಲೆಯಲ್ಲಿ ಶೇ.೬೯.೧೬, ಹಾವೇರಿ ಜಿಲ್ಲೆಯಲ್ಲಿ ಶೇ.೭೫.೭೮, ಗದಗ ಜಿಲ್ಲೆಯಲ್ಲಿ ಶೇ.೭೪.೨೯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.೭೪.೬೮ ಸೇರಿ ಒಟ್ಟು ಶೇ.೭೨.೮೮ ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.


ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತರಾದ ೩೫,೧೧೯ ಮತದಾರರ ಪೈಕಿ ಪುರುಷ ೧೪,೯೮೨, ಮಹಿಳೆ ೧೦,೨೩೨ ಸೇರಿದಂತೆ ಒಟ್ಟು ಪದವೀಧರ ಮತದಾರರು ೨೫,೨೧೪ ಜನರು ಮತ ಚಲಾಯಿಸಿದ್ದಾರೆ. ಒಟ್ಟು ಧಾರವಾಡ ಜಿಲ್ಲೆಯಲ್ಲಿ ಶೇ.೭೧.೮೦ ರಷ್ಟು ಮತದಾನವಾಗಿದೆ.


ಹಾವೇರಿ ಜಿಲ್ಲೆಯಲ್ಲಿ ನೋಂದಾಯಿತರಾದ ೨೪,೬೪೮ ಮತದಾರರ ಪೈಕಿ ಪುರುಷ ೧೨,೭೪೮, ಮಹಿಳೆ ೬,೬೫೩ ಸೇರಿದಂತೆ ಒಟ್ಟು ಪದವೀಧರ ಮತದಾರರು ೧೯,೪೦೧ ಜನರು ಮತ ಚಲಾಯಿಸಿದ್ದಾರೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಶೇ.೭೮.೭೧ ರಷ್ಟು ಮತದಾನವಾಗಿದೆ.


ಗದಗ ಜಿಲ್ಲೆಯಲ್ಲಿ ನೋಂದಾಯಿತರಾದ ೨೧,೫೯೪ ಮತದಾರರ ಪೈಕಿ ಪುರುಷ ೧೧,೦೨೮, ಮಹಿಳೆ ೫,೭೪೨ ಸೇರಿದಂತೆ ಒಟ್ಟು ಪದವೀಧರ ಮತದಾರರು ೧೬,೭೭೦ ಜನರು ಮತ ಚಲಾಯಿಸಿದ್ದಾರೆ. ಒಟ್ಟು ಗದಗ ಜಿಲ್ಲೆಯಲ್ಲಿ ಶೇ.೭೭.೬೬ ರಷ್ಟು ಮತದಾನವಾಗಿದೆ.


ಉತ್ತರ ಕನ್ನಡ ಜಿಲ್ಲೆಯಲ್ಲಿ ನೋಂದಾಯಿತರಾದ ೧೬,೦೩೯ ಮತದಾರರ ಪೈಕಿ ಪುರುಷ ೬,೩೫೨, ಮಹಿಳೆ ೫,೯೨೧ ಸೇರಿದಂತೆ ಒಟ್ಟು ಪದವೀಧರ ಮತದಾರರು ೧೨,೨೭೩ ಜನರು ಮತ ಚಲಾಯಿಸಿದ್ದಾರೆ. ಒಟ್ಟು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.೭೬.೫೨ ರಷ್ಟು ಮತದಾನವಾಗಿದೆ.


ಅಂತಿಮವಾಗಿ ಮತಕ್ಷೇತ್ರ ವ್ಯಾಪ್ತಿಯ ೪ ಜಿಲ್ಲೆಗಳು ಸೇರಿದಂತೆ ಒಟ್ಟು ೯೭,೪೦೦ ನೋಂದಾಯಿತ ಮತದಾರರಿದ್ದು, ಈ ಪೈಕಿ ೪೫,೧೧೦ ಪುರುಷ ಹಾಗೂ ೨೮,೫೪೮ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೩,೬೫೮ ಮತದಾರರು ಇಂದಿನ ಮತದಾನದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಒಟ್ಟು ಶೇ.೭೫.೬೨ ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.


ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬAದಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳು ಮತ್ತು ಅಭ್ಯರ್ಥಿಗಳ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ. ಮತಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಶಾಂತಿಯುತವಾಗಿ ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.