
ಕಲಬುರಗಿ,ಜೂ 10: ಕಾಯಕ ಯೋಗಿ ಸಂಸ್ಥೆಯಿಂದ ವಿಶ್ವ ಪರಿಸರ ದಿನದ ಅಂಗವಾಗಿ “ಗಿಡ ಉಳಿಸಿ ನಾಡು ಬೆಳೆಸಿ” ಧ್ಯೇಯ ವಾಕ್ಯದೊಂದಿಗೆ ನಗರದ ವಿವಿಧ ಕಡೆ ಸುಮಾರು 700 ಸಸಿಗಳನ್ನು ವಿತರಿಸಲಾಯಿತು.
ಸಸಿ ವಿತರಣೆ ಕಾರ್ಯಕ್ರಮದಲ್ಲಿ ಕಾಯಕ ಯೋಗಿ ಸಂಸ್ಥೆಯ ಅಧ್ಯಕ್ಷರಾದ ಕೇದಾರನಾಥ್ ಕುಲಕರ್ಣಿ ಹಾಗೂ ಜೈ ಹನುಮಾನ್ ಸ್ವಾರ್ ಗೇಟ್ ನಗರ ಅಧ್ಯಕ್ಷರಾದ ಅಣ್ಣಪ್ಪ ವಾಡಿ, ವಿನೋದ್ ಪಾಟೀಲ್, ಸಿದ್ರಾಮಪ್ಪ ಕುಂಬಾರ್, ಮಲ್ಲಿಕಾರ್ಜುನ್ ಕುಂಬಾರ್, ಪ್ರಭು ಯಲಗಾರ್, ಪರಮೇಶ್ವರ್ ನಿಂಬರ್ಗಾ,ಸ್ವಾಮಿ ಸೋಮನಾಥ್, ಆನಂದ್ ದನಶ್ರೀ, ಬಸವರಾಜ್ ಹೊಲ್ದ, ಅನಿಲ್, ಸಂತೋಷ ದನಶ್ರೀ, ಈರಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


























