Home ಜಿಲ್ಲೆ ಪೊಲೇಲ ಯಲ್ಲಮ್ಮ ದೇವಿಯ ೬ ನೇ ಜಾತ್ರಾ ಮಹೋತ್ಸವ : ಅದ್ದೂರಿ ಬೋನಾಲ್ ಮೆರವಣಿಗೆ

ಪೊಲೇಲ ಯಲ್ಲಮ್ಮ ದೇವಿಯ ೬ ನೇ ಜಾತ್ರಾ ಮಹೋತ್ಸವ : ಅದ್ದೂರಿ ಬೋನಾಲ್ ಮೆರವಣಿಗೆ

ಗುರುಮಠಕಲ್: ಶ್ರಾವಣ ಮಾಸದ ಪ್ರಾರಂಭದ ದಿನ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಪ್ರಸಿದ್ಧ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಇರುವ ಶ್ರೀ ಪೊಲೇಲ ಯಲ್ಲಮ್ಮ ದೇವಿಯ ೬ನೇ ವರ್ಷದ ಜಾತ್ರಾ ಮಹೋತ್ಸವವು ಅತ್ಯಂತ ವೈಭವ ಹಾಗೂ ಸಡಗರ-ಸಂಭ್ರಮದಿAದ ಜರುಗಿತು. ಜಾತ್ರಾ ಮಹೋತ್ಸವದ ನಿಮಿತ್ತ ದೇವಿಗೆ ಮುಂಜಾನೆಯಿAದಲೇ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ವೈಭವದ ಬೋನಾಲ್ ಮೆರವಣಿಗೆ, ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಅದ್ದೂರಿ ಬೋನಾಲ್ ಮೆರವಣಿಗೆಯು ಭಕ್ತರ ಸಮ್ಮುಖದಲ್ಲಿ ಜರುಗಿತು. ಪಟ್ಟಣದ ಪ್ರಮುಖರಾದ ಆಶಿರೆಡ್ಡಿ ಕೊಸ್ಗಿ ಅವರ ಮನೆಯಿಂದ ಸಾಂಪ್ರದಾಯಿಕ ಬೋನಾಲ್ ಹೊರಡಿಸಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರ ಜಯಘೋಷಗಳು ಮೊಳಗಿದವು. ಇಂತಹ ಕಾರ್ಯಕ್ರಮದಲ್ಲಿ ಪೋತರಾಜ ನೃತ್ಯ, ಕೈಕುಸ್ತಿ ಆಕರ್ಷಣೆ, ಈ ಬಾರಿಯ ಮೆರವಣಿಗೆಯಲ್ಲಿ ವಿಶೇಷವಾಗಿ ಕರೆಸಲಾಗಿದ್ದ ‘ಪೋತರಾಜ’ ಅವರ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು. ಪೋತರಾಜರ ಅದ್ಭುತ ನೃತ್ಯ ಮೆರವಣಿಗೆಯಲ್ಲಿದ್ದ ಭಕ್ತರಲ್ಲಿ ಹೊಸ ಉತ್ಸಾಹ ಹಾಗೂ ಧಾರ್ಮಿಕ ವಾತಾವರಣವನ್ನು ನಿರ್ಮಾಣ ಮಾಡಿತು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾಭಿಮಾನಿ ಹಾಗೂ ಯುವಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕೈಕುಸ್ತಿ’ ಪಂದ್ಯಾವಳಿಯು ಸಾರ್ವಜನಿಕರಿಗೆ ಭರಪೂರ ಮನರಂಜನೆ ನೀಡಿತು. ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮೀಣ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾದರು. ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜಶೇಖರ ಸ್ವಾಮಿ, ಕನ್ನಯ್ಯ ಪಡಿಗೆ, ಸಂತೋಷ ಕಂಬಾರ, ಮೊನೊಪ್ಪ, ನಾರಾಯಣ, ಯೋಗೇಶ್ ಸುಮರಾ, ಶೇಖರಪ್ಪ, ವೆಂಕಟಪ್ಪ, ಮಲ್ಲಪ್ಪ, ಭೀಮಶಪ್ಪ, ನಾಗೇಶ್ ಸೇರಿದಂತೆ ನೂರಾರು ಸದ್ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.