Home ಕ್ರೈಂ ಸುದ್ದಿಗಳು 1.07 ಕೋಟಿ ಮೌಲ್ಯದ 537 ಕಳೆದುಹೋದ ಮೊಬೈಲ್‍ಗಳ ಪತ್ತೆ

1.07 ಕೋಟಿ ಮೌಲ್ಯದ 537 ಕಳೆದುಹೋದ ಮೊಬೈಲ್‍ಗಳ ಪತ್ತೆ

ವಿಜಯಪುರ, ಅ. 28: ಜಿಲ್ಲೆಯಲ್ಲಿ ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‍ಗಳ ಪತ್ತೆ ಕಾರ್ಯಕ್ಕೆ ಪೆÇಲೀಸ್ ಇಲಾಖೆCEIR ಪೆÇೀರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು, ಇದುವರೆಗೆ ಸುಮಾರು 1.07 ಕೋಟಿ ಮೌಲ್ಯದ 537 ಮೊಬೈಲ್‍ಗಳನ್ನು ಪತ್ತೆಹಚ್ಚಲಾಗಿದೆ. ಪತ್ತೆಯಾದ ಮೊಬೈಲ್‍ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಮರಳಿಸಲಾಗುತ್ತಿದೆ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಾಧನವು ಸಾರ್ವಜನಿಕರ ದೈನಂದಿನ ಜೀವನದ ಅತ್ಯವಶ್ಯಕ ಸಾಧನವಾಗಿದೆ. ಹೀಗಾಗಿ ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಕುರಿತು ಪ್ರತಿದಿನ ಪೆÇಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪೆÇಲೀಸ್ ಇಲಾಖೆ CEIR (Central Equipment Identity Register) ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ.

IMEI ಸಂಖ್ಯೆಯಿಂದ ಪತ್ತೆ

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (ಆoಖಿ) ರೂಪಿಸಿರುವ CEIR ಒಂದು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭದಲ್ಲಿ ಅದರ IMEI (International Mobile Equipment Identity) ಸಂಖ್ಯೆಯ ಆಧಾರದ ಮೇಲೆ ಸಾಧನವನ್ನು ಪತ್ತೆಹಚ್ಚಲು, ಬ್ಲಾಕ್ ಮಾಡಲು ಹಾಗೂ ಮರುಪಡೆಯಲು ಸಹಕಾರಿಯಾಗಿದೆ.
ಕಳವು ಅಥವಾ ಕಳ್ಳತನವಾದ ಮೊಬೈಲ್‍ಗಳ ದುರುಪಯೋಗವನ್ನು ತಡೆಗಟ್ಟುವಲ್ಲಿಯೂ CEIR ವ್ಯವಸ್ಥೆ ಪರಿಣಾಮಕಾರಿಯಾಗಿದೆ. ವಿಜಯಪುರ ಜಿಲ್ಲೆಯ ಎಲ್ಲ 28 ಪೆÇಲೀಸ್ ಠಾಣೆಗಳಲ್ಲೂ CEIR ಪೆÇೀರ್ಟಲ್ ಅನ್ನು ಬಳಸಿಕೊಂಡು ಸಾರ್ವಜನಿಕರಿಂದ ದಾಖಲಾಗುವ ದೂರುಗಳ ಆಧಾರದ ಮೇಲೆ ನಿಯಮಿತವಾಗಿ ಮೊಬೈಲ್‍ಗಳ ಪತ್ತೆ ಕಾರ್ಯ ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 1,07,40,000 ಮೌಲ್ಯದ 537 ಮೊಬೈಲ್‍ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ಸಂಬಂಧಪಟ್ಟ ಸಾರ್ವಜನಿಕರಿಗೆ ಮರಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೊಬೈಲ್ ಪತ್ತೆ ಕಾರ್ಯ ನಿರಂತರವಾಗಿದ್ದು, ಸಾರ್ವಜನಿಕರಿಂದ ದಾಖಲಾಗುವ ದೂರುಗಳ ಆಧಾರದ ಮೇಲೆ ಮುಂದೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಸಂದರ್ಭದಲ್ಲಿ ಸಾರ್ವಜನಿಕರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, CEIR ಪೆÇೀರ್ಟಲ್‍ನ ಸದುಪಯೋಗ ಪಡೆದುಕೊಳ್ಳಬೇಕು. ಮೊಬೈಲ್‍ನ IMEI ಸಂಖ್ಯೆಯನ್ನು ಸುರಕ್ಷಿತವಾಗಿ ದಾಖಲಿಸಿಟ್ಟುಕೊಳ್ಳುವುದು ಪತ್ತೆ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ.