
ಕಲಬುರಗಿ,ಜು.15-ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಜು.16 ರಿಂದ 17 ರವರೆಗೆ ಎರಡು ದಿನಗಳ ಕಾಲ ಹುತಾತ್ಮರ 29ನೇ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಜು.16 ರಂದು ರಾತ್ರಿ 9 ಗಂಟೆಗೆ ಶ್ರೀಮಠದ ಶ್ರೀ ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹುತಾತ್ಮರ ಗದ್ದುಗೆಯ ಹಾಗೂ ದಾಸಬೋಧ ಪೂಜೆಯೊಂದಿಗೆ ಪುಣ್ಯಸ್ಮರಣೆ ಸಪ್ತಾಹಕ್ಕೆ ಚಾಲನೆ ನೀಡುವರು.
ಅಂದು ಸಂಜೆ ಅಭಿಷೇಕ ವಿಶೇಷ ಪೂಜೆ ಪುರಾಣ-ಪ್ರವಚನ, ರಾತ್ರಿ ಜಾಗರಣೆ ನಿಮಿತ್ಯ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜು.17 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಭಜನಾಪದ, ಪುರಾಣ-ಪ್ರವಚನ, ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಹುತಾತ್ಮರ ಪುಣ್ಯ ಸ್ಮರಣೋತ್ಸವ ಮಂಗಲಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.































