Home ಜಿಲ್ಲೆ ಕಲಬುರಗಿ 18 ಸಾವಿರ ರೂ.ಮೌಲ್ಯದ 180 ಗ್ರಾಂ.ಗಾಂಜಾ ವಶ

18 ಸಾವಿರ ರೂ.ಮೌಲ್ಯದ 180 ಗ್ರಾಂ.ಗಾಂಜಾ ವಶ

ಕಲಬುರಗಿ,ಜು.23-ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಪನೂರ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲಿ ಅಕ್ರಮವಾಗಿ ಗಾಂಜಾ ಮಾರಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಅಶೋಕ, ರಾಜಕುಮಾರ ಚೌಧರಿ, ತೌಸೀಫ್, ಪ್ರದೀಪ್, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಕಾಂತಾ ಕಾಲೋನಿಯ ರಾಕೇಶ್ ಚನ್ನಬಸಪ್ಪ ಗೊಬ್ಬುರಕರ್ (27) ಎಂಬಾತನನ್ನು ಬಂಧಿಸಿ 18 ಸಾವಿರ ರೂ.ಮೌಲ್ಯದ 180 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.