
ಕಲಬುರಗಿ,ಸೆ.1-ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ಸದನದಲ್ಲಿ ಯಾಕೆ ಚರ್ಚೆ ಯಾಕೆ ಮಾಡಲಿಲ್ಲ ? ಶಿವಶಂಕರಪ್ಪ ಸಾಹುಕಾರ್ ಹೆಸರು ಯಾಕೆ ಹೇಳ್ತಿಲ್ಲ ? ಸಾಹುಕಾರ್‍ಗೆ ಅಧ್ಯಕ್ಷ ಮಾಡಿದ್ದು ಯಾರು ? ಕುಮಾರಸ್ವಾಮಿಯವರಿಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೆಪಿಎಸ್‍ಸಿಯಲ್ಲಿ ಪ್ರಿಯಾಂಕ್ ವಿಕೆಟ್ ಬಿಳುತ್ತೆ ಎನ್ನೋ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಬೌಲರ್‍ಗಳು ಹೇಗಿದ್ದಾರೆ ನಮಗೆ ಅವರು ನೋಬಾಲ್, ಪುಲ್ ಟಾಸ್ ಹಾಕ್ತಿದ್ದಾರೆ. ಇಲ್ಲಿ ಅಂಪೈರ್ ಯಾರೇ ಇದ್ರು ವಿಕೆಟ್ ಬಿಳೋದು ಅವರದ್ದೇ. ಬಿಜೆಪಿ-ಜೆಡಿಎಸ್‍ನವರಿಗೆ ಸಾಮಾನ್ಯ ಜ್ಞಾನ ಇಲ್ಲ. ಇವಾಗ ಮಧ್ಯವರ್ತಿ ಸಿಕ್ಕಿರೋದು ಯಾರು ? ಅವರ ಹೆಗಲ ಮೇಲೆ, ನಿಮ್ಮ ಹೆಗಲ ಮೇಲೆ, ಮೋದಿಯವರ ಹೆಗಲ ಮೇಲೆ ಬಿಜೆಪಿ ಶಲ್ಯ ಇದೆ. ಬಿಜೆಪಿ ನಾಯಕರೇ ಕೇಕ್ ಕಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನೋದು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಇವರು ಜನರಿಗೆ ಏನ್ ಹೇಳ್ತಾರೋ ಗೊತ್ತಿಲ್ಲ. ಸಿಐಡಿ ಚಾರ್ಜ್‍ಶಿಟ್‍ನಲ್ಲಿ ಹೆಸರಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ನಾವು ಸಿದ್ದರಿದ್ದೇವೆ. ಅದಕ್ಕೆ ಉತ್ತರ ಕೂಡ ಕೊಡ್ತಿವಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಾದಯಾತ್ರೆ ಮೂಲಕ ಜನರ ಬಳಿಯಾದರೂ ದಾಖಲೆಗಳನ್ನ ಇಡಲಿ. ಹಿಟ್ & ರನ್ ಮಾಡಬೇಡಿ ಬಿಜೆಪಿಗರೇ, ನೂರು ಸಲ ಸುಳ್ಳು ಹೇಳಿದರೂ ಸತ್ಯವಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಕ್ಯಾಬಿನೆಟ್ ನಲ್ಲಿ ಯಾರು ಇರಬೇಕು, ಯಾರು ಇರಬಾರದು ಅನ್ನೊದು ಹೈಕಮಾಂಡ್ ನಿರ್ಧರಿಸುತ್ತದೆ. ಈಶ್ವರಪ್ಪ ಪ್ರಮಾಣಿಕರಿದ್ರೆ ಅವರಿಗೆ ಕಳೆದ ಬಾರಿ ಯಾಕೆ ಟಿಕೆಟ್ ನೀಡಲಿಲ್ಲ? ನಾಗೇಂದ್ರ ಮತ್ತು ಈಶ್ವರಪ್ಪ ಪ್ರಕರಣಕ್ಕೆ ವ್ಯತ್ಯಾಸವಿದೆ. ರಾಜೀನಾಮೆ ಕೊಟ್ಟ ಬಳಿಕವೂ ಪಾದಯಾತ್ರೆ ಮಾಡ್ತಿದಾರೆ. ಬಿಜೆಪಿ-ಜೆಡಿಎಸ್ ಮೈತ್ರಿನೇ ಇಲ್ಲ. ಬಿಡದಿ ಬಗ್ಗೆ ಬಿಜೆಪಿಗೆ ಗೊಂದಲ. ಬಳ್ಳಾರಿ ಪಾದಯಾತ್ರೆ ಬಗ್ಗೆ ಜೆಡಿಎಸ್‍ಗೆ ಗೊಂದಲ ಇದೆ. ದಿನಗೂಲಿ ಕೊಟ್ಟು ಇಂದಿನ ಪಾದಯಾತ್ರೆಗೆ ಕರೆಯಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಎನ್‍ಡಿಆರ್‍ಎಫ್ ನಿಯಮ ಪ್ರಕಾರ ಬರಗಾಲ ಘೋಷಣೆ ಮಾಡದ ಹಾಗೇ ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಅನ್ಯಾಯ ಮಾಡಿತ್ತು. ಅದಕ್ಕಾಗಿ ನಾವು ಸುಪ್ರೀಂ ಮೊರೆಹೋಗಿ ನ್ಯಾಯ ಪಡೆದುಕೊಂಡಿದ್ವಿ. ಕಂದಾಯ, ಕೃಷಿ ಸಚಿವರು ಕೇಂದ್ರ ಸಚಿವರುಗಳನ್ನ ಭೇಟಿ ಮಾಡಿದ್ದಾರೆ. ಜೊತೆಗೆ ಸಿಎಂ ಕೂಡ ಖುದ್ದು ಭೇಟಿ ಮಾಡಿದ್ದಾರೆ.ಇತಿಹಾಸದಲ್ಲಿ ಅತೀ ಹೆಚ್ಚು ಬೆಳೆ ವಿಮೆ ಪರಿಹಾರ ಕಲಬುರಗಿ ಜಿಲ್ಲೆಗೆ ಬಂದಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಎಫ್‍ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಎಫ್‍ಐಆರ್ ಆಗಲ್ಲ. ಅನ್ಯಾಯ ಅಕ್ರಮ ಪ್ರಶ್ನಿಸಿದವರ ವಿರುದ್ಧ ಎಫ್‍ಐಆರ್ ಆಗಲ್ಲ. ಇದು ಕೇಂದ್ರ ಸರ್ಕಾರ ನಡೆದುಕೊಳ್ಳುವ ರೀತಿಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಝಿರೋ ಟ್ರಾಫಿಕ್ ನಾವು ಕೇಳಿಲ್ಲ. ಬಿ.ಸಿ ಪಾಟೀಲ್ ಅವರಿಗೆ ಏನ್ ತೊಂದರೆಯಾಗಿದೆ ಎನ್ನೋದು ಗೊತ್ತಿಲ್ಲ. ಅವರು ಹೋಂ ಮಿನಿಸ್ಟರ್ ಇದ್ರೆ ಏನ್ ಮಾಡ್ತಿದ್ದರು. ಸುಮ್ನೆ ಯಾವುದ್ಯಾವುದೋ ವಿಚಾರ ಮಾತನಾಡಿದ್ರೆ ಏನ್ ಮಾಡೋದು ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸುಭಾಷ ರಾಠೋಡ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






























