Home ಜಿಲ್ಲೆ ಬೆಂಗಳೂರು ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಶರವಣ ಭೇಟಿ

ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಶರವಣ ಭೇಟಿ

ದೊಡ್ಡಬಳ್ಳಾಪುರ, ಜು. ೮- ತಾಲ್ಲೂಕಿನ ಪ್ರಸಿದ್ಧ ಫ್ಲಾಟ್ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮತ್ತು ಅವಧೂತ ಶ್ರೀ ವಿನಯ್ ಗುರೂಜಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ರೈತರು ಪ್ರಾರ್ಥಿಸುತ್ತಿರುವ ಮಳೆ ಆಗಮನಕ್ಕೆ ದೇವರ ಕೃಪೆ ಇರಲಿ, ಬರಪೀಡಿತ ಪ್ರದೇಶಗಳಲ್ಲಿಮಳೆಯಾಗಲಿ, ಸುಬ್ರಹ್ಮಣ್ಯ ಅಂದರೆ ಶಕ್ತಿ, ಸೈಂದನನ್ನ ಪ್ರಾರ್ಥನೆ ಮಾಡಬೇಕು ಅಂತ ಮನಸ್ಸಿಗೆ ಬಂದಿದ್ದು, ಶರವಣ ಅವರೊಂದಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ಗುರೂಜಿ ತಿಳಿಸಿದರು. ಸರ್ಕಾರ ಬಿಡದಿ ರೈತರನ್ನ ಸೇರಿಸಿಕೊಂಡು ಮಾತಾಡಬೇಕು, ಎಲ್ಲರ ಸಹಮತ ತೆಗೆದುಕೊಂಡು ಮುಂದುವರೆಯಬೇಕು, ಬಂದು ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿ ಶಾಂತಿಯುತ ವಾತಾವರಣದಿಂದ ಸಮಸ್ಯೆ ಬಗೆಹರಿಯುತ್ತೆ ಎಂದರು. ಈ ವೇಳೆ ಶಾಸಕ ಧೀರಜ್, ಮುನಿರಾಜು, ಉಪವಿಭಾಗಾಧಿಕಾರಿ ಮಂಜುನಾಥ್ ಮೊದಲಾದವರು ಹಾಜರಿದ್ದರು.

ಪ್ರದೀಪ್ ಜವಾಬ್ದಾರಿಯಿಂದ ನಡೆದುಕೊಳ್ಳಲಿ: ಶರವಣ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಶಾಸಕರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾಮಿಡಿ ಪೀಸ್ ಆಗ ಬಾರದು, ಮಾಸ್ಟರ್‌ಪೀಸ್ ಆಗಬೇಕು. ದೊಡ್ಡ ನಾಯಕರ ಬಗ್ಗೆ ಮಾತನಾಡಬೇಕಾದ್ರೆ ಮಾಹಿತಿ ಪಡೆದುಕೊಂಡು ಮಾಡ ನಾಡಬೇಕಿದೆ. ೫ ವರ್ಷಕ್ಕೊಮ್ಮೆ ಜನರ ಬಳಿ ಹೋಗಲೇಬೇಕು, ನಮ್ಮ ಅವಧಿ ಮುಗಿದ ಮೇಲೆ ಜನ ವ್ಯಕ್ತಿತ್ವ ಹಾಗೂ ನಮ್ಮ ಕೆಲಸಗಳನ್ನು ಗುರುತಿಸುತ್ತಾರೆ. ನಿಮ್ಮಲ್ಲಿರುವ ಚಾರಿತ್ಯದಿಂದ ಚರಿತ್ರೆಯನ್ನು ನೋಡ್ತೀವಿ. ಎಲ್ಲಿ ಸಂಸ್ಕಾರ ಇರುತ್ತೋ ಅಲ್ಲಿ ನಮಸ್ಕಾರ ಇರುತ್ತೆ, ಇದನ್ನ ಜನ ಗಮನಿಸ್ತಾರೆ. ಮೊದಲ ಬಾರಿಗೆ ಶಾಸಕರಾಗಿದ್ದೀರಿ ಕುಮಾರಸ್ವಾಮಿ ಅವರ ಬಗ್ಗೆ ಮಾತ ನಾಡುವಾಗ ನಾಲಿಗೆ ಬಿಗಿಹಿಡಿದು ಮಾತನಾಡಬೇಕಾಗುತ್ತದೆ. ಇಲ್ಲಸಲ್ಲದ ಆರೋಪ ಮಾಡಬಾರದು. ಪ್ರದೀಪ್ ಈಶ್ವರ್‌ನನ್ನ ಸ್ನೇಹಿತನೇ ಆದರೆ, ಈ ರೀತಿ ಅವರು ಹೇಳುವುದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದರು.