
ಕೆ.ಆರ್.ಪುರ, ಜೂ.೨೨-ಪ್ರತಿದಿನ ಯೋಗ ಅಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಕ್ರೈಸ್ಟ್ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯ ಆಡಳಿತ ಅಧಿಕಾರಿ ಅಭಿಷೇಕ್ ಅವರು ತಿಳಿಸಿದರು.
ಕೆಆರ್ ಪುರದ ಹಳೇಹಳ್ಳಿ ಬಳಿ ಇರುವ ಕ್ರೈಸ್ಟ್ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಗವೆಂದರೆ ಕೇವಲ ವ್ಯಾಯಾಮವಲ್ಲ, ಅದು ನಮ್ಮ ದೇಹ ಮನಸ್ಸು ಶಾಂತಿ ಗೊಳಿಸುವ ಭಾರತೀಯ ಪರಂಪರೆ. ನಮ್ಮ ಭಾರತ ದೇಶವು ವಿಶ್ವಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಇದಾಗಿದೆ ಎಂದು ತಿಳಿಸಿದರು.
ಚಿರಾಯು ಯೋಗ ಅಕಾಡೆಮಿಯ ಸಂಸ್ಥಾಪಕಿ ವಿದ್ಯಾ ಶ್ರೀ ಮಾತನಾಡಿ ಪ್ರತಿದಿನ ಯೋಗ ಮಾಡಿ ಆರೋಗ್ಯ ಕಾಪಾಡಿ ಬಲಿಷ್ಠ ಭಾರತ ನಿರ್ಮಿಸಿ” ಎಂದು ಮನವಿ ಮಾಡಿದರು. ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಯೋಗವು ವಿಶ್ವದಾದ್ಯಂತ ಮನೆಮಾತಾಗಿದೆ ಅದನ್ನು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಮನ್ಸೂರ್ ಪಾಷ, ಶಾಲೆಯ ಪ್ರಾಂಶುಪಾಲರಾದ ಸುನೀತಾ ಖಾನಪುರಿ ಶಾಲೆಯ ಉಪ ಪ್ರಾಂಶುಪಾಲರಾದ ರವೀನಾ ಮತ್ತಿತರರು ಹಾಜರಿದ್ದರು.


























