
ಕಲಬುರಗಿ,ಆ.18: ಕ್ರೈಂ ಬ್ರ್ಯಾಂಚ್ ಪೊಲೀಸರಂತೆ ನಟಿಸುತ್ತ ಜ್ಯೋತಿಷಿಯೊಬ್ಬರ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಸೇರಿದಂತೆ ಅಳಂದ ಹಾಗೂ ಶಹಬಾದ್ ಉಪವಿಭಾಗದ ಠಾಣಾ ವ್ಯಾಪ್ತಿಯ 10 ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
ಅಳಂದ ತಾಲೂಕಿನ ನರೋಣಾ ಠಾಣಾ ವ್ಯಾಪ್ತಿಯ 1,ಶಹಬಾದ್ ಠಾಣೆ ವ್ಯಾಪ್ತಿಯ 4 ,ವಾಡಿ ಠಾಣೆ 3 ,ಚಿತ್ತಾಪುರ,ಮಾಡಬೂಳ ಠಾಣೆ ವ್ಯಾಪ್ತಿಯ ತಲಾ 1 ಸೇರಿದಂತೆ 10 ಪ್ರಕರಣಗಳಲ್ಲಿ 18 ಆರೋಪಿಗಳನ್ನು ಬಂಧಿಸಲಾಗಿದೆ.
ಚಿನ್ನಾಭರಣ,ನಗದು.ಬೈಕುಗಳು, ಸೇರಿದಂತೆ ಒಟ್ಟು 42.66 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ,ಶಹಬಾದ ಡಿವೈಎಸ್‍ಪಿ ಶಂಕರಗೌಡ ಪಾಟೀಲ,ಅಳಂದ ಡಿವೈಎಸ್‍ಪಿ ತಮ್ಮರಾಯ ಪಾಟೀಲ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು































