Home ಜಿಲ್ಲೆ ಮೈಸೂರು ಸರ್ಕಾರಿ ಶಾಲೆ ಉಳಿಸಲು ಪಣತೊಟ್ಟ ಶಿಕ್ಷಕಿ: ಸಾರ್ವಜನಿಕರಿಂದ ಮೆಚ್ಚುಗೆ

ಸರ್ಕಾರಿ ಶಾಲೆ ಉಳಿಸಲು ಪಣತೊಟ್ಟ ಶಿಕ್ಷಕಿ: ಸಾರ್ವಜನಿಕರಿಂದ ಮೆಚ್ಚುಗೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.05:
ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದ್ದವು ಅವುಗಳನ್ನು ಮುಚ್ಚಿಸದೆ ತೆರೆಸುವ ಸಂಕಲ್ಪವನ್ನು ಮಾಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಪವಿತ್ರ ಸ್ಥಳ ಗವಿರಂಗನಾಥಸ್ವಾಮಿ ಬೆಟ್ಟದ ಬಳಿಯಿರುವ ಬಿಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.


2023ರಲ್ಲಿ 6 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ 2026ಕ್ಕೆ 16 ಮಕ್ಕಳ ದಾಖಲಾತಿಯನ್ನು ಪಡೆಯಲಾಗಿದೆ. ಇದಕ್ಕೆ ಕಾರಣೀಭೂತರಾದವರು ಶಿಕ್ಷಕಿ ರೂಪಾ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಇವರು, 2023ರಲ್ಲಿ ಈ ಶಾಲೆಗೆ ಸ್ವಯಂ ಪ್ರೇರಿತರಾಗಿ ಕೌನ್ಸಿಲಿಂಗ್ ಮೂಲಕ ಆಯ್ಕೆಯಾಗಿ ಬಂದರು. ಶಾಲೆಯಲ್ಲಿನ ಮಕ್ಕಳ ಸಂಖ್ಯೆಯನ್ನು ನೋಡಿ ದಿಗ್ಭ್ರಮೆಗೊಂಡಿದ್ದರು. ಒಂದು ವೇಳೆ 2024ಕ್ಕೆ ಮಕ್ಕಳು ದಾಖಲಾಗದಿದ್ದರೆ ಶಾಲೆಯು ಮುಚ್ಚುತ್ತದೆ ಎಂಬ ಮೇಲಧಿಕಾರಿಗಳ ಮಾತಿನಿಂದ ಬೇಸರ ಮಾಡಿಕೊಳ್ಳದೆ, ಶಾಲೆಯನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದರು.


ಆರಂಭದಲ್ಲಿ ಬಿಲ್ಲೇನಹಳ್ಳಿ ಗ್ರಾಮದ ಎಲ್ಲಾ ಮನೆಯವರನ್ನು ಸಂಪರ್ಕಿಸಿದರು. ಶಾಲೆಯ ಮಹತ್ವ ಹಾಗೂ ಸರ್ಕಾರಿ ಶಾಲೆಗಳು ಏಕೆ ಉಳಿಯಬೇಕು ಎಂಬುದರ ಬಗ್ಗೆ ತಿಳಿಸಿದರು. ಪೆÇೀಷಕರಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹದಿಂದ ದಾಖಲಾತಿ ಕುಸಿಯುತ್ತಿದೆ ಎಂಬ ವಿಷಯವನ್ನು ಅರಿತುಕೊಂಡರು. ತಕ್ಷಣವೇ ಪೆÇೀಷಕರಿಗೆ, “ಇಂಗ್ಲಿಷ್ ಭಾಷೆಯನ್ನು ನಾನೇ ಅಚ್ಚುಕಟ್ಟಾಗಿ ಕಲಿಸುತ್ತೇನೆ” ಎಂಬ ಭರವಸೆಯನ್ನು ನೀಡಿದರು.
ಈಗ ಶಾಲೆಯಲ್ಲಿ ಮಕ್ಕಳಿಂದ ಹಿಡಿದು ಅಡುಗೆಯವರವರೆಲ್ಲರೂ ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಾರೆ. ಶಾಲೆಗೆ ಬಂದ ಅಧಿಕಾರಿಗಳನ್ನು ಕೂಡ ಮಕ್ಕಳು ಇಂಗ್ಲಿಷ್‍ನಲ್ಲಿಯೇ ಸ್ವಾಗತಿಸುತ್ತಾರೆ. ಶಾಲೆಯ ಪರಿಸರವನ್ನು ಹಸಿರೀಕರಣ ಮಾಡಿದ್ದಾರೆ. ಈ ಶಾಲೆಯನ್ನು ನೋಡುವುದೇ ಒಂದು ಚಂದ. ತಮ್ಮ ಈ ಅಲ್ಪಕಾಲದ ಸಾಧನೆಗೆ ಗ್ರಾಮದ ದಾನಿಗಳು ಕೂಡ ಕೈಜೋಡಿಸಿದ್ದಾರೆ.


ಜೊತೆಗೆ ಮುಖ್ಯ ಶಿಕ್ಷಕ ಮಹೇಶ್ ಅವರ ಪೆÇ್ರೀತ್ಸಾಹವನ್ನು ಹಾಗೂ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರನ್ನು ಪ್ರೀತಿಯಿಂದ ನೆನೆಯುತ್ತಾರೆ ಶಿಕ್ಷಕಿ ರೂಪಾ.