
ಸಂಜೆವಾಣಿ ನ್ಯೂಸ್
ಮೈಸೂರು: ನ.16:- ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಉತ್ತನಹಳ್ಳಿ ಎಗೇಹುಂಡಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರು ಕೋಟಿ ರೂ. ಅನುದಾನ ನೀಡುವಂತೆ 33 ಹಳ್ಳಿಗಳ ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧಿ ಉಳ್ಳ ಈ ದೇವಾಲಯವನ್ನು ಅಭಿವೃದ್ಧಿಪಡಿಸಲು ದೇವಾಲಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ಯಜಮಾನರು ಹಾಗೂ ಗ್ರಾಮಸ್ಥರು, ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಸುಮಾರು ಮೂರು ಕೋಟಿಗೂ ಹೆಚ್ಚು ಅನುದಾನ ಬೇಕಾಗಿದ್ದು, ಸರ್ಕಾರದಿಂದ 3 ಕೋಟಿ ರೂ. ಅನುದಾನ ಕೊಡಿಸಿ ದೇವಾಲಯದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಮ್ಮ ಕ್ಷೇತ್ರಕ್ಕೆ ಸೇರಿರುವ ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರೆ ತಾಯಿ ಲಕ್ಷ್ಮಿ ದೇವಿಯು ನಿಮ್ಮ ಹಾಗೂ ನಿಮ್ಮ ಕುಟುಂಬದವರಿಗೆ ಆಶೀರ್ವಾದ ಮಾಡಿ ಒಳ್ಳೆಯದು ಮಾಡುತ್ತಾಳೆ ಎಂದು ಗ್ರಾಮಸ್ಥರು ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿ ಮಾಡಿದರು.
ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಅವರು, ದೇವಾಲಯದ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಕೊಡಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ತನಹಳ್ಳಿ, ಎಗೇಹುಂಡಿ, ಕೆಂಪಿ ಸಿದ್ದನಹುಂಡಿ, ಹಳ್ಳಿದಿಡ್ಡಿ, ಕಡಕೋಳ, ಚಿಕ್ಕ ಬೀಚನಹಳ್ಳಿ, ಡಿ. ಸಾಲುಂಡಿ, ಕೆರೆಹುಂಡಿ, ಮಂಡಕಳ್ಳಿ, ಕರಡಿ ಮಾದಯನಹುಂಡಿ, ಕೆ.ಎನ್. ಹುಂಡಿ, ಬೀರೇಗೌಡರ ಹುಂಡಿ, ಬೀರಿಹುಂಡಿ, ಕೋಟೆಹುಂಡಿ, ಮರಿಗೌಡನಹುಂಡಿ, ಸಜ್ಜೆಹುಂಡಿ, ದೊಡ್ಡ ಮಾರಗೌಡನಹಳ್ಳಿ, ಮಾಕನಹುಂಡಿ, ತೂಣಚಿ ಕೊಪ್ಪಲು, ಕ್ಯಾತನಹಳ್ಳಿ, ಅರಕೆರೆ, ನುಗ್ಗಳ್ಳಿ, ದೊಡ್ಡಕನ್ಯ, ಗೆಜ್ಜೆಗನಹಳ್ಳಿ, ತಾಂಡವಪುರ, ಬಂಚಳ್ಳಿ ಹುಂಡಿ, ನಂಜನಗೂಡು, ಅಹಲ್ಯ, ಗುಂಡೂರಾವ್ ನಗರ, ಗೊದ್ದನಪುರದ ಹುಂಡಿ, ಮಡ್ರಳ್ಳಿ, ಗೌಡಳ್ಳಿ, ಮುತ್ತಿಗೆ, ಮಂಡನಹಳ್ಳಿ ಸೇರಿದಂತೆ ಸುಮಾರು 33 ಹಳ್ಳಿಗಳ ಯಜಮಾನರು ಹಾಗೂ ಗ್ರಾಮಸ್ಥರು ಹಾಜರಿದ್ದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಲಹೆಗಾರ ಎಂ. ರಾಮಯ್ಯ, ಯಜಮಾನರು ಹಾಗೂ ಮುಖಂಡರಾದ ಚಿಕ್ಕ ಬೀರಯ್ಯ, ಮಹೇಶ್, ರಾಜು, ರಾಮೇಗೌಡ, ಬಸಪ್ಪ, ಕೆಂಪಿ ಸಿದ್ದನಹುಂಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜಯ್ಯ, ಸದಸ್ಯ ಶಿವನಂಜು, ಗುಡ್ಡಪ್ಪ, ಜ್ಞಾನೇಶ್, ನಾಗೇಂದ್ರ, ಶಿವಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಬೀರ, ಬೀರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ, ಸಿದ್ದರಾಮಯ್ಯನಹುಂಡಿ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಜ್ಜೆಹುಂಡಿ ರವಿ, ಕಂದಾಯ ಇಲಾಖೆಯ ಆರ್.ಐ. ಯೋಗೇಂದ್ರಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.





















