
ಸಂಜೆವಾಣಿ ನ್ಯೂಸ್
ಮೈಸೂರು, ಜೂ.23:- 15 ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಟಾಟಾ ಪವರ್ ಕಾಪೆರ್Çೀರೇಷನ್‍ಗೆ ಪರವಾನಗಿ ಕೊಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಜಯನಗರದಲ್ಲಿರುವ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜನ ಸಾಮಾನ್ಯರ ತೆರಿಗೆ ಹಣದಿಂದ ಸ್ಥಾಪನೆಯಾಗಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್ ಪ್ರಸರಣ ಮತ್ತು ವಿದ್ಯುತ್ ಉತ್ಪಾದನಾ ಇಲಾಖೆಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಒಡೆತನಕ್ಕೆ ಬಿಟ್ಟುಕೊಡಬಾರದು. ರಾಜ್ಯದ ಜನರು ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಮೂಲ ಮಾಲೀಕರಾಗಿರುತ್ತಾರೆ.
ಮಾಲೀಕರು ಒಪ್ಪದ ಹೊರತು ಯಾವುದೇ ಸಂಸ್ಥೆಯನ್ನು ಖಾಸಗೀಕರಣಕ್ಕೆ ಹಸ್ತಾಂತರ ಮಾಡುವಂತಿಲ್ಲ. ಮೂಲ ಸೌಕರ್ಯ ವಲಯಗಳ ಖಾಸಗೀಕರಣ ಜನ ವಿರೋಧಿ ಹಾಗೂ ಬಂಡವಾಳ ಶಾಹಿಗಳ ಪರವಾದ ನಿಲುವಾಗಿರುತ್ತದೆ ಎಂದು ಆಕ್ಷೇಪಿಸಿದರು.
ಖಾಸಗಿ ಕಂಪನಿಗಳಿಗೆ ಲಾಭ ಮಾತ್ರ ಮೂಲ ಉದ್ದೇಶವಾಗಿರುತ್ತದೆಯೇ ಹೊರತು ರಾಜ್ಯದ ಸಾಮಾನ್ಯ ಜನರಿಗಾಗಲಿ ಅಥವಾ ಆ ಸಂಸ್ಥೆಗೆ ಕೆಲಸ ಮಾಡುವ ನೌಕgರಿಗಾಗಲಿ ಮಾನ್ಯತೆ ಇರುವುದಿಲ್ಲ. ಖಾಸಗೀಕರಣದಿಂದ ಜನಪರ ಸರ್ಕಾರಗಳು ಸಾಮಾಜಿಕ ಬದ್ಧತೆಯ ಕಾಳಜಿ ಇರದ ಯಾವ ಕಾರ್ಯಕ್ರಮವನ್ನೂ ಅನುಷ್ಠಾನ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ದಿನದಂದೇ 2400 ಚದರ ಅಡಿ ಒಳಗಡೆ ಇರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ಕ್ಲಿಯರೆನ್ಸ್ ಬೇಕಾಗಿರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ, ಮೈಸೂರಿನ ನಗರ ಮತ್ತು ಕಂದಾಯ ಪ್ರದೇಶದಲ್ಲಿ 2400 ಒಳಗಡೆ ಇರುವ ವಿಸ್ತೀರ್ಣದ ಮನೆಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಲಂಚದ ಬೇಡಿಕೆಯನ್ನು ಚೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಡುತ್ತಾರೆ. ಇದರ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಸೆಸ್ಕ್ ವಿರುದ್ಧ ನೂರಾರು ಕೋಟಿ ಹಗರಣದ ದೋಷಾರೋಪ ವರದಿಯಾಗಿದ್ದು, ಅದರ ಮೇಲೆ ಏನು ಕ್ರಮಕೈಗೊಳ್ಳಲಾಗಿದೆ? ಇಲಾಖೆಯಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಪುತ್ರನಿಗೆ ಟೆಂಡರ್ ಕೊಡಲಾಗಿದೆ.
ಯಾವುದೇ ಬ್ಯಾಂಕ್ ಗ್ಯಾರಂಟಿಗಳಿಲ್ಲದೆ ಟೆಂಡರ್ ಕೊಟ್ಟು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದರಿಂದ ಸುಮಾರು 100 ಕೋಟಿ ರೂ. ಹಗರಣ ಮಾಡಿರುವ ದೋಷಾರೋಪ ಇದೆÉ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್, ಮುಖಂಡರಾದ ಶಿರಮಳ್ಳಿ ಮಂಜುನಾಥ್, ಸಿದ್ದಲಿಂಗಪುರ ಮೋಹನ್‍ಕುಮಾರ್, ಗಳಗರಹುಂಡಿ ವೆಂಕಟೇಶ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಮುಖರು ಭಾಗವಹಿಸಿದ್ದರು.
























