
ಸಂಜೆವಾಣಿ ವಾರ್ತೆ
ಹರಪನಹಳ್ಳಿ:, ಸೆ.17: ಹರಪನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ವಿ.ಜಿ.ಪ್ರಕಾಶ್ ಗೌಡ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ನಗರದ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ 2026-27ನೇ ಸಾಲಿಗೆ ನಡೆದ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಮನಗೌಡ ಪಾಟೀಲ್ ಹಾಗೂ ವಿ.ಜಿ.ಪ್ರಕಾಶ್‍ಗೌಡ ಇವರು ಸ್ಪರ್ಧಿಸಿದ್ದರು.
ಅಧ್ಯಕ್ಷರ ಆಯ್ಕೆಗೆ ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೇ ನಡೆದಿದ್ದು, ಒಟ್ಟು 231 ಮತ ದಾನವಾಯಿತು.
ಸಂಜೆ ನಡೆದ ಮತ ಎಣಿಕೆಯಲ್ಲಿ ವಿ.ಜಿ.ಪ್ರಕಾಶಗೌಡ ಇವರಿಗೆ 140 ಮತ ಪಡೆದು ಜಯಶೀಲರಾಗಿದಾರೆ, . ರಾಮನಗೌಡ ಪಾಟೀಲ್‍ರು 87 ಮತ ಪಡೆದು ಪರಾಭವಗೊಂಡರು.1 ಮತ ತಿರಸ್ಕøತ ಗೊಂಡಿತು.
ವಿ.ಜಿ.ಪ್ರಕಾಶಗೌಡ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಮಂಜಣ್ಣ ಹಾಗೂ ಡಿ.ಹನುಮಂತಪ್ಪ ಘೋಷಣೆ ಮಾಡಿದರು.
ವಕೀಲರ ಸಂಘದ ಪದಾಧಿಕಾರಿಗಳು –
ಉಪಾಧ್ಯಕ್ಷರಾಗಿ ಕೆ.ದಾಕ್ಷಾಯಿಣಿ, ಕಾರ್ಯದರ್ಶಿಯಾಗಿ ಕೆ.ಪ್ರಕಾಶ, ಜಂಟಿ ಕಾರ್ಯದರ್ಶಿ ರೇಣುಕ ಎಫ್ ಮೇಟಿ, ಖಜಾಂಚಿಯಾಗಿ ಬಿ.ತಿಪ್ಪೇಶ, ಕಾರ್ಯಕಾರಿ ಮಂಡಳಿ ಸ್ಥಾನಕ್ಕೆ ಎ.ಲಕ್ಷ್ಮಣ, ಕೆ.ಕಂಡ್ಯಪ್ಪ, ಎಸ್.ರಾಮಚಂದ್ರನಾಯ್ಕ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಮತ್ತಿಹಳ್ಳಿ ಅಜ್ಜಣ್ಣ, ಕೆ.ಪ್ರಕಾಶ, ಗೋಣಿಬಸಪ್ಪ, ಬಸವರಾಜ ಸಂಗಪ್ಪನವರ್, ಚನ್ನಪ್ಪ, ಹೂಲೆಪ್ಪ, ಕೆ.ನಾಗರಾಜ, ವಾಸುದೇವ, ಕೆ.ಮೆಹಬೂಬ್‍ಸಾಬ್, ಬಸವರಾಜ, ಎಸ್.ಜಿ.ತಿಪ್ಪೇಸ್ವಾಮಿ, ಮುಜಬುರ್ ರೇಹಮಾನ್, ದಿನಕರ್, ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಇದ್ದರು.































