Home ಜಿಲ್ಲೆ ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ

ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ,20- ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಅವರ 200 ನೇಜನ ವಾರ್ಷಿಕೋತ್ಸ ವಸಂದರ್ಭದಲ್ಲಿ ಎಐಡಿಎಸ್‍ಓವತಿಯಿಂದ ಅಮರಾಪುರ  ಗ್ರಾಮದಲ್ಲಿ ಮಕ್ಕಳ ಶಿಬಿರ ಸಂಘಟಿಸಲಾಗಿತ್ತು.ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಮುಖಂಡರು ಹಾಗೂ ಹೋರಾಟಗಾರರಾದ ವಿದ್ಯಾ  ಅವರು, ಇಂದಿನ ಸಾಮಾಜಿಕ ವಾತಾವರಣ ಮೌಲ್ಯಗಳಿಲ್ಲದೆ ಕೊಳೆತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ನಮ್ಮದೇ ದೇಶದಲ್ಲಿ ನಿಸ್ವಾರ್ಥವಾಗಿ ದೇಶಕ್ಕಾಗಿ ಜೀವ ಕೊಟ್ಟ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ತಿಳಿಸದೆ ಬರೀ  ಮಾಕ್ರ್ಸ್ ಕಾರ್ಡ್‍ಗಳಲ್ಲಿ ಬರುವ ಅಂಕಿಗಳ ಹಿಂದೆ ಬಿದ್ದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದ-ರಿಂದ ಮಕ್ಕಳೆಲ್ಲರೂ ಮಹಾನ್ ವ್ಯಕ್ತಿಗಳ ಹೋರಾಟದ ಬದುಕು ಮತ್ತು ಅವರು ಪಾಲಿಸಿದ ನೈತಿಕತೆ ಪರಿಚಯಿಸುವುದರಿಂದ ಮಾತ್ರ ನಿಮ್ಮಲ್ಲಿ ಸದೃಢ ವ್ಯಕ್ತಿತ್ವರೂಪಿಸಲು ಸಾಧ್ಯ, ಎಂದು ಹೇಳಿದರು.

ಶಿಬಿರದ ಮೊದಲ ಗೋಷ್ಠಿಯಲ್ಲಿ ಜ್ಯೋತಿಬಾ ಫುಲೆ ಅವರ ಜೀವನ ಕಥೆಯನ್ನು ಹೇಳುತ್ತಾ, ಅಂದು ಪುಲೆ ಅವರು ಸಾಮಾಜಿಕ ಸಂಪ್ರದಾಯದ ವಿರೋಧದ ಮಧ್ಯೆ ಹೆಣ್ಣು ಮಕ್ಕಳಿಗಾಗಿವಮತ್ತು ದಲಿತ ದಮನಿತ ಮಕ್ಕಳಿಗಾಗಿ ಶಾಲೆಯನ್ನು ತೆರೆಯದಿದ್ದರೆ, ಇಂದು ನಾವ್ಯಾರೂ ಈ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಮತ್ತು ಸಮಾನವಾಗಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು, ಎಂದು ತಿಳಿಸಿದರು.

ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಒಂದೆಡೆ ಸರ್ಕಾರಗಳು ಇಂದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿವೆ. ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲಾಗುತ್ತಿದೆ. ಇದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಸಂಚು ಎಂದು ಹೇಳಿದರು.

ಶಿಬಿರದಲ್ಲಿ ಮನೋರಂಜನೆ ಆಟಗಳು, ಹಾಡುಗಳುಹಾಗೂ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳು ಕೆಲವು ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರು ಮತ್ತು ಸಾರ್ವಜನಿಕ ಶಿಕ್ಷಣ ಸಮಿತಿಯ ನಾಗರಾಜ,ಬಸವರಾಜ, ಪಾರ್ವತಿ, ನಾಗಮ್ಮ, ಲಕ್ಷ್ಮಿ, ಸುಂಕಪ್ಪ, ಎಐಡಿಎಸ್‍ಒ ಜಿಲ್ಲಾ ಕಾರ್ಯದಲ್ಲಿ ಮಂಜುನಾಥ ಮತ್ತು ಊರಿನ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.