
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜೂ.23:- ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ವಾರದಲ್ಲಿ ಒಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪೆÇಲೀಸ್ ಸಾರ್ವಜನಿಕ ಸಭೆ ಮಾಡಲು ಕ್ರಮ ವಹಿಸುತ್ತೇನೆ, ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಎಸ್.ಆರ್.ಎಂ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೆÇಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಾರ್ವಜನಿಕರಿಂದ ಹೆಚ್ಚಾಗಿ ಆವಳಿ ತಾಲೂಕಿನಲ್ಲಿ ಮದ್ಯ ಮಾರಾಟ ದಿಂದ ಆಗುತ್ತಿರುವ ಸಮಸ್ಯೆಗಳ ಸಾರ್ವಜನಿಕರು ದೂರನ್ನು ನೀಡಿದ್ದಾರೆ ಈ ಸಂಬಂದ ಅಬಕಾರಿ ಡಿ.ಸಿ ಅವರ ಗಮನಕ್ಕೆ ತರಲಾಗುವುದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ನವರು ಮನೆಗಳ ಬಳಿ ಹೋಗಿ ಸಾಲಗಾರರಿಗೆ ಅವಮಾನ ಮಾಡಿ ಹಣ ಕೇಳಿದರೆ ಅಂತಹ ಮೈಕ್ರೋ ಫೈನಾನ್ಸ್ ವಿರುದ್ದ ಕೇಸು ದಾಖಲಿಸಲಾಗುವುದು. ಹಾವಳಿ ತಡೆಯಲು ಕ್ರಮ ವಹಿಸಲಾಗಿದೆ, ಬೈಕ್ ಮತ್ತು ವಾಹನಗಳನ್ನು ಸೀಜ್ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ.ನೀಡಿದರು.
ಜಿಲ್ಲಾ ಪೆÇಲೀಸ್ ವತಿಯಿಂದ ಪ್ರತಿಯೊಂದು ತಾಲೂಕಿನ ಠಾಣೆಗಳಿಗೆ ಬೇಟಿ ನೀಡಿ ಸಾರ್ವಜನಿಕರ ಕಂದು ಕೊರತೆ, ಆಹ್ವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಈಗಾಗಲೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತದಲ್ಲಿ ಎರಡು ಠಾಣೆಗಳಿದ್ದು ಗ್ರಾಮಾಂತರ ಠಾಣೆ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕೋರಲಾಗುವುದು ಎಂದರಲ್ಲದೆ ಪೆÇಲೀಸ್ ಇಲಾಖೆ ವತಿಯಿಂದ ಅಪರಾಧ ತಡೆಗಟ್ಟಲು ಸೂಕ್ತ ಕ್ರಮ ವಹಿಸುತ್ತೇನೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಇದಕ್ಕೂ ಮೊದಲು ಸಾರ್ವಜನಿಕರು, ವಿವಿದ ರೈತ ಸಂಘಟನೆಯವರು, ಹಾಗೂ ದಲಿತ ಮುಖಂಡರು ಮಾತಮಾಡಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ಮಧ್ಯದ ಹಾವಳಿ ಹೆಚ್ಚಾಗಿದೆ, ರೈತರು ಜಮೀನಿನಲ್ಲಿ ಉಳುಮೆ ಮಾಡಲು ಸಾದ್ಯವಾಗುತ್ತಿಲ್ಲ, ಹಳ್ಳಿಗಳಲ್ಲಿ ವೈನ್ಸ್ ಸ್ಟೋರ್, ಬಾರ್ ಆಗಿರುವುದರಿಂದ ಬಾಟಲ್ ಗಳನ್ನು ರೈತರ ಗದ್ದೆ ಜಮೀನಿನಲ್ಲಿ ಹಾಕುತ್ತಿದ್ದಾರೆ ಈ ಬಗ್ಗೆ ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಹಾಗಾದರೆ ರೈತರು ಜಮೀನನ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಡಿ ರೈತರು ದೂರಿದರು.
ಹೊಸ ಠಾಣೆ ಕೊಡಿ, ಜೊತೆಗೆ ಸಂಚಾರ ಠಾಣೆ ಬೇಕು, ಬಹು ದಿನದ ಬೇಡಿಕೆ, ವಿ.ವಿ.ರಸ್ತೆ, ಸಿ.ಎಂ.ರಸ್ತೆ, ಬಜಾರ್ ರಸ್ತೆ, 7 ನೇ ಕ್ರಾಸ್ ರಸ್ತೆ ಸಂಚಾರ ವ್ಯವಸ್ಥೆ ಹದಗೆಟ್ಟಿದೆ, ಪಟ್ಟಣದ ಗರುಡಗಂಭ ವೃತ್ತದಿಂದ ಪುರಸಭೆ ವೃತ್ತದ ವರೆವಿಗೂ ಪಾದಚಾರಿ ಸಂಚಾರ ಮಾಡುವ ಮಾರ್ಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಾರೆ, ಪಾದಚಾರಿಗಳು ಒಡಾಡಲು ಸಮಸ್ಯೆ ಆಗುತ್ತಿದೆ ಸರಿಪಡಿಸಿ. ಆಹ್ವಾಲು ಸಲ್ಲಿಸಿದರು.
ಬಾಡಿಗೆ ಕೊಡುವ ವೇಳೆ ಆದಾರ್ ಕಾರ್ಡ್ ಇತರೆ ದಾಖಲಾತಿಪಡೆದು ಕೊಂಡು ಕೊಡಲಿ, ಪಟ್ಟಣದ ಕೆಲವು ರಸ್ತೆಗಳನ್ನು ಏಕಮುಖ ಸಂಚಾರ ಮಾಡಿಸಿ,ಪಟ್ಟದಲ್ಲಿ ಬೀಟ್ ಪೆÇಲೀಸ್ ಬರುತ್ತಿಲ್ಲ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಬೀಟ್ ಪೆÇಲೀಸ್ ನಿಯೋಜಿಸಿ ಮಳಲಿ ಗ್ರಾಮದಲ್ಲಿ ಹತ್ತು ಕುಟುಂಬಕ್ಕೆ ಜಮೀನು ವಾಪಸ್ಸ್ ಕೊಡಿಸಿ, ಪಟ್ಟಣದ ಪಶು ಆಸ್ಪತ್ರೆ ಹಿಂಬಾಗದಲ್ಲಿ ಅಲೆಮಾರಿ ಜನಾಂಗಕ್ಕೆ ತಗಡು ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು, ಜಿ.ಪ್ಲಸ್ ಮನೆಗಳನ್ನು ನಿರ್ಮಿಸಿ ಕೊಡಿ, ಡಿವೈಎಸ್.ಪಿ. ಟಿ.ಬಿ.ರಾಜಣ್ಣ, ತಹಸೀಲ್ದಾರ್ ಜಿ. ಸುರೇಂದ್ರ ಮೂರ್ತಿ, ತಾ.ಪಂ.ಇಓ ಕುಲದೀಪ್, ಪಟ್ಟಣದ ಪೆÇಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಸ್ಚಾಮೀಗೌಡ, ಸಾಲಿಗ್ರಾಮ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್,ಸಮಾಜ ಕಲ್ಯಾಣ ಇಲಾಖೆ ಡಿಇಓ ರವಿ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಹಿರಿಯ ಆರೋಗ್ಯ ಸಹಾಯಕಿ ರಾಜೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಪ್ರಕಾಶ್, ತಾ.ಕುರುಬರ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ, ರಾಜ್ಯ ರೈತ ಪರ್ವದ ಗೌರವಾಧ್ಯಕ್ಣ ಜೆ.ಎಂ.ಕುಮಾರ್, ಪುರಸಭೆ ಮಾಜಿ ಸದಸ್ಯ ಅಸ್ಲಂಪಾಷ, ದಲಿತ ಸಂಘರ್ಷ ಸಮಿತಿ ಸಂಚಾಲಕ ದಿವಾಕರ್, ಸಾಮಾಜಿಕ ಕಾರ್ಯಕರ್ತ ಬಿ.ಡಿ.ಕೃಷ್ಣ, ಹಿಂದೂ ಜಾಗೃತಿ ವೇದಿಕೆ ಮುಖಂಡ ಕೃಷ್ಣಭಟ್ ಭಜರಂಗದಳ ಮುಖಂಡ ನಂಜುಂಡ, ಪಾರು ಪತ್ತೆದಾರ್ ಆರತಿ ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
























