
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಬೀದರನಲ್ಲಿ ಡಾ. ಬಾಬು ಜಗಜೀವನ ರಾಂ ನಿಗಮ(ಲಿಡ್ಕರ್) ನೂತನವಾಗಿ ಆರಂಭಿಸಿರುವ ಲಿಡ್ಕರ್ ಮಾರಾಟ ಮಳಿಗೆಗೆ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಉದ್ಘಾಟನೆ ಮಾಡಿದ್ದಾರೆ.
ಇದೇ ವೇಳೆ ಅವರು ಸಮುದಾಯದ ಮುಖಂಡರು ಹಾಗೂ ಚರ್ಮ ಕುಶಲಕರ್ಮಿಗಳೊಂದಿಗೆ ಕುಂದು ಕೊರತೆ ಸಮಾಲೋಚನೆ ಮಾಡಿದರು.
ಈ ಸಂದರ್ಭದಲ್ಲಿ ಬೀದರ್ ನಗರಸಭೆ ಮಾಜಿ ಅಧ್ಯಕ್ಷ ಪರ್ನ್ ಡಿಸ್, ಬಳ್ಳಾರಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋವರ್ಧನ್ , ಬೀದರ್ ಲಿಡ್ಕರ್ ಕಾಲೋನಿ ಸಮಾಜದ ಮುಖ್ಯಸ್ಥ ಶುಭಾಸ್, ಸಮುದಾಯದ ಯುವ ಮುಖಂಡ ಪ್ರದೀಪ್ ಹೆಗ್ಡೆ, ಬೀದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಲಿಡ್ಕರ್ ಜಿಲ್ಲಾ ಕಚೇರಿ ಸಿಬ್ಬಂದಿ ದತ್ತು ಹೊಸಮನಿ ಮೊದಲಾದವರು ಇದ್ದರು.

























