Home ಜಿಲ್ಲೆ ಕಲಬುರಗಿ ಪ್ರೊ. ಅಬ್ದುಲ್ ರಬ್ ಉಸ್ತಾದ್ ಉರ್ದು ಗಜಲ್‍ಗಳು ವಿದ್ಯಾರ್ಥಿಗಳಿಗೆ ಪ್ರೇರಣೆ

ಪ್ರೊ. ಅಬ್ದುಲ್ ರಬ್ ಉಸ್ತಾದ್ ಉರ್ದು ಗಜಲ್‍ಗಳು ವಿದ್ಯಾರ್ಥಿಗಳಿಗೆ ಪ್ರೇರಣೆ

ಕಲಬುರಗಿ :ಏ.29: ಉರ್ದು ಸಾಹಿತ್ಯ್ರದಲ್ಲಿ ಅಪಾರ ಪಾಂಡಿತ್ಯ ಗಳಿಸಿರುವ ಉರ್ದು ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಪ್ರಾಧ್ಯಾಪಕ ಪೆÇ್ರ. ಅಬ್ದುಲ್ ರಬ್ ಉಸ್ತಾದ್ ಮೃದು ಸ್ವಭಾವದ ವ್ಯಕ್ತಿತ್ವದವರು. ಅತ್ಯಂತ ಸರಳ ಜೀವಿ ಮತ್ತು ಭಾವಜೀವಿಯಾಗಿದ್ದಾರೆ. ವಿಶ್ವವಿದ್ಯಾಲಯದ ಅಬ್ಯುದಯಕ್ಕೆ ಇವರು ಸಲ್ಲಿಸಿರುವ ಸುದೀರ್ಘ ಸೇವೆಯನ್ನು ವಿಶ್ವವಿದ್ಯಾಲಯ ಸ್ಮರಿಸುತ್ತದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಕಲಾ ನಿಕಾಯದ ಉರ್ದು ಮತ್ತು ಪರ್ಷಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಪ್ರಾಧ್ಯಾಪಕ ಪೆÇ್ರ. ಅಬ್ದುಲ್ ರಬ್ ಉಸ್ತಾದ್ ಅವರ ವಯೋನಿವೃತ್ತಿ ನಿಮಿತ್ತ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕಠಿಣ ಪರಿಶ್ರಮದಿಂದ ಶಿಕ್ಷಣ ಪಡೆದು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಕರಿಗೆ ನಿಜವಾದ ಸಂಪತ್ತು ವಿದ್ಯಾರ್ಥಿಗಳೇ ವಿನಃ ಹಣ ಮತ್ತು ಆಸ್ತಿಯಲ್ಲ. ಗುರುವಿನಿಂದ ಗಳಿಸಿದ ಶ್ರೇಯಸ್ಸನ್ನು ವಿದ್ಯಾರ್ಥಿಗಳು ಸದಾ ಸ್ಮರಿಸಿಕೊಳ್ಳಬೇಕು ಎಂದರು.
ಕಲಾ ನಿಕಾಯದ ಡೀನ್, ಹಂಗಾಮಿ ಕುಲಪತಿಯಾಗಿ ನ್ಯಾಕ್ ಸಮಿತಿ, ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿರುವ ಪ್ರೊ. ಅಬ್ದುಲ್ ರಬ್ ಅತ್ಯುತ್ತಮ ಬೋಧನೆ, ಸಾಹಿತ್ಯ ಜ್ಞಾನ, ಗಜಲ್ ರಚನೆಯಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಾವೀಣ್ಯತೆ ಸಾಧನೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ. ಜೀವನದ ಏರು-ಪೇರು, ಒಳಿತು-ಕೆಡುಕು ಮತ್ತು ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಇವರ ತಾಳ್ಮೆ ಮತ್ತು ಸಹನೆ ಗುಣ ಇತರರಿಗೆ ಮಾದರಿ. ಉರ್ದು ಮತ್ತು ಪರ್ಷಿಯನ್ ಭಾಷಾ ಸಾಹಿತ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದಿರುವ ಇವರ ಸೇವೆ ಮತ್ತು ವ್ಯಕ್ತಿತ್ವವನ್ನು ಪ್ರಶಂಸಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ರಮೇಶ ಲಂಡನಕರ್ ಮುಖ್ಯ ಅತಿಥಿಯಾಗಿ ಮಾತನಾಡಿ ಉರ್ದು ಗಜಲ್ ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿರುವ ಡಾ. ಅಬ್ದುಲ್ ರಬ್ ಉಸ್ತಾದ್ ಉತ್ತಮ ನಡೆ-ನುಡಿ ವ್ಯಕ್ತಿ. ನಗುಮುಖದಿಂದ ಶಾಯರಿ ಹೇಳುತ್ತಾ ನಗಿಸುವ ಇವರು ಎಲ್ಲರನ್ನು ಕಾಳಜಿ, ಸಹೋದರತೆಯಿಂದ ಕಂಡಿದ್ದಾರೆ. ಒಳ್ಳೆಯ ಸಹದ್ಯೋಗಿ ಮತ್ತು ಪೋಷಕರು ಸಿಗುವುದು ಅಪರೂಪ. ಪ್ರೊ. ರಬ್ ನಿವೃತ್ತಿವರೆಗಿನ ಗೆಳೆತನ, ಬಾಂದವ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಸ್ಮರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ವಿಶೇμÁಧಿಕಾರಿ ಪೆÇ್ರ. ರಮೇಶ ರಾಠೋಡ ಮಾತನಾಡಿ ಪ್ರೊ. ಅಬ್ದುಲ್ ರಬ್ ಉಸ್ತಾದ್ ಹಿರಿಯರು ಮತ್ತು ಕಿರಿಯರನ್ನು ಸಮಾನವಾಗಿ ಕಂಡಿದ್ದಾರೆ. ಉರ್ದು ಗಜಲ್‍ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಾಯರಿ ಹೇಳುವುದು ಮತ್ತು ಗಜಲ್ ಬರವಣಿಗೆ ಮೂಲಕ ಅಂತರ ರಾಷ್ಟ್ರೀಯ ಖ್ಯಾತಿ ಪಡೆದಿರುವ ಇವರ ನಿವೃತ್ತಿ ಜೀವನ ಸುಖಕರವಾಗಿರಲಿ. ಉರ್ದು ಸಾಹಿತ್ಯ ಸೇವೆ ಮುಂದುವರೆಸಲೆಂದು ಆಶಿಸಿದರು.
ಕಲಾ ನಿಕಾಯದ ಡೀನರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೆÇ್ರ. ಎಚ್.ಟಿ. ಪೆÇೀತೆ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ. ಅಬ್ದುಲ್ ರಬ್ ಉಸ್ತಾದ ಮಗುವಿನಂತ ಮನಸ್ಸು. ಜೀವನದ ಕಷ್ಟ, ಕಾರ್ಪಣ್ಯ, ನೋವು, ಅಪಮಾನ ಅನುಭವ ಮನಸ್ಸಿನಲ್ಲಿದ್ದರೂ ಎಲ್ಲರೊಡನೆ ಸಂತಸದಿಂದ ಬೆರೆತು ನಗುವಿನ ಸವಿ ಹಂಚಿದರು. ಕಷ್ಟದಲ್ಲಿರುವವರನ್ನು ಕರುಳಬಳ್ಳಿಯಂತೆ ಅಪ್ಪಿಕೊಂಡು ಸಹಾಯಹಸ್ತ ನೀಡಿದ್ದಾರೆ. ಸದಾ ನಗು ಚೆಲ್ಲುವ ಮೂಲಕ ಟೀಕೆ ಮತ್ತು ವಿರೋಧಗಳನ್ನು ಮುಕ್ತವಾಗಿ ಸ್ವೀಕರಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹೃದಯತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದ್ದಾರೆ. ಅವರ ನಿವೃತ್ತಿ ಜೀವನ ಸಂತಸದಿಂದ ಕೂಡಿರಲಿ ಎಂದರು.

ಇಂಗ್ಲೀμï ವಿಭಾಗದ ಮುಖ್ಯಸ್ಥ ಡಾ. ನಿಂಗಣ್ಣ ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜೂರ್ ಅಹಮದ್ ದಖನಿ, ಡಾ. ತಾತ್ಯರಾವ್, ಡಾ. ಶಿವಶರಣಪ್ಪ ಕೂಡ್ಲಿ, ಡಾ. ಆನಂದ್ ಮೇಟಿ, ಡಾ. ಸೂಲಬಾಯಿ ಅನಿಸಿಕೆ ಹಂಚಿಕೊಂಡರು. ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ್ ಸುಜ್ಯಾತ್, ಬೋಡೇರಿಯಾಜ್ ಅಹಮದ್, ಪ್ರೊ. ಅಬ್ದುಲ್ ರಬ್ ಉಸ್ತಾದ್ ಕುಟುಂಭ ವರ್ಗದವರು, ನಾಗರೀಕರು, ಕಲಾ ನಿಕಾಯದ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಶ್ರೀಮತಿ ಭವನೇಶ್ವರಿ ಮತ್ತು ಸಿದ್ದಾರ್ಥ ಚಿಮ್ಮಾ ಇದ್ಲಾಯಿ ಗಜಲ್ ಗಾಯನ ಪ್ರಸ್ತುತಪಡಿಸಿದರು. ಡಾ. ಆಕಾಶ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ. ಶಿವಾನಂದ ಕಡಗಂಚಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಸಂತೋಷ ಕುಂಬಾರ ವಂದಿಸಿದರು. ಡಾ. ಎಂ.ಬಿ. ಕಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು.

ಗುರುಗಳ ನೀಡಿದ ಶಿಕ್ಷಣ ನನಗೆ ಮನುಷ್ಯ ಧರ್ಮ ಕಲಿಸಿದೆ. ಗುರುಹಿರಿಯರ ಕೃಪೆಯಿಂದ ಶಿಕ್ಷಕ ವೃತ್ತಿ ನನಗೆ ಸಂಸ್ಕøತಿ ಮತ್ತು ಸಂಸ್ಕಾರವನ್ನು ಬೆಳೆಸಿದೆ. ನೈತಿಕತೆ, ಸಭ್ಯತೆ, ಸೊಬಗು ಮತ್ತು ದಕ್ಷತೆ ಇವುಗಳು ಮಾನವ ನಾಗರೀಕತೆಯ ಕನ್ನಡಿಯಾಗಿವೆ. ಮನುಷ್ಯ ಎಂದಿಗೂ ಅಹಂಕಾರ ಪಡಬಾರದು. ಜ್ಞಾನದ ಕೊರತೆಯಿಲ್ಲದ ಜೀವನ ಮನುಷ್ಯತ್ವ ಬೆಳೆಸುತ್ತದೆ. ಬುದ್ಧಿವಂತರು ದುರಾಸೆ ಪಡೆದೆ ಉತ್ತಮ ಕೆಲಸ, ಸಭ್ಯ ನಡತೆ ಮತ್ತು ಮಾನವೀಯತೆ ಮರೆಯಬಾರದು. ನೆಹರು ಅವರು ಹೇಳಿರುವಂತೆ ವಿಶ್ವಜ್ಞಾನ ಮತ್ತು ವಿಶ್ವ ಚಿಂತನೆ ಬೆಳೆಸಿಕೊಂಡರೆ ಎತ್ತರಕ್ಕೆ ಬೆಳೆದು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ತಾವೇ ರಚಿಸಿರುವ ಗಜಲ್ ಶಾಯಿರಿ ಹೇಳಿದರು.
ಪೆÇ್ರ. ಅಬ್ದುಲ್ ರಬ್ ಉಸ್ತಾದ್
ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರು